HEALTH TIPS

ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳ ಸಂಪನ್ನ

   
        ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣೀ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವ ಸಂಪನ್ನಗೊಂಡಿತು. ಕಿರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲ್, ಹೈಯರ್ ಸೆಕೆಂಡರಿಯಲ್ಲಾಗಿ ಸುಮಾರು 90 ಶಾಲೆಗಳ 2500 ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
    ಶಾಲಾ ಸಂಚಾಲಕ ಶಂಕರ ಮೋಹನ್ ಪೂಂಜಾ ಮೇಳ ಉದ್ಘಾಟನೆಗೆ ಮುನ್ನ ಧ್ವಜಾರೋಹಣಗೈದರು. ಕಾಸರಗೋಡು ಜಿಲ್ಲಾ ಶಿಕ್ಷಣ ಅಧಿಕಾರಿ ನಂದಿಕೇಶನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಮಾಲುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ, ರಾಷ್ಟ್ರ ಪ್ರಶಸ್ತಿ ವಿಜೇತ ದಾನಪ್ಪ ಬಲುರಾಗಿ, ಕೇರಳ ಕೃಷಿ ವಿಶ್ವವಿದ್ಯಾಲಯ ವರ್ಕಾಡಿ ಇದರ ಮುಖ್ಯಸ್ಥ ಡಾ.ಶಶಿಕಾಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡದರು. ಶಾಲಾ ಸಂಚಾಲಕರ ಪ್ರತಿನಿಧಿ, ನಿವೃತ್ತ ಡ್ರಗ್ ಕಂಟ್ರೋಲರ್ ರಘುರಾಮ ಭಂಡಾರಿ, ಸಾಯಿ ಸೇವಾ ಪ್ರತಿಷ್ಠಾನ ದೈಗೋಳಿ ಇದರ ಟ್ರಸ್ಟಿ ಡಾ.ಉದಯ ಕುಮಾರ್, ಡಯಟ್ ಕಾಸರಗೋಡಿನ ಪ್ರಾಧ್ಯಾಪಕ ಶಶಿಧರನ್ ಎಂ. ಮೊದಲಾದವರು ಶುಭಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಹಮೀದ್ ಕಣಿಯೂರು, ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ಪಜ್ವ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಂದ್ರಶೇಖರ ರೈ, ಪ್ರಭಾರ ಪ್ರಾಂಶುಪಾಲ ಚಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಭಾರತಿ ಸ್ವಾಗತಿಸಿ, ಹಿರಿಯ ಅಧ್ಯಾಪಿಕೆ ಶಶಿಪ್ರಭಾ ವಂದಿಸಿದರು. ಅಧ್ಯಾಪಕ ಇಸ್ಮಾಯಿಲ್ ಹಾಗು ಅಧ್ಯಾಪಿಕೆ ಕೃಷ್ಣವೇಣಿ ಕಾರ್ಯಕ್ರಮ ನಿರೂಪಿಸಿದರು.
        ಸಮಾರೋಪ ಸಮಾರಂಭವನ್ನು ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಹಮೀದ್ ಕಣಿಯೂರು ಅವರ ಅಧ್ಯಕ್ಷತೆಯಲ್ಲಿ ಸರ್ವ ಶಿಕ್ಷಣ ಕೇರಳದ ಜಿಲ್ಲಾ ಯೋಜನಾಧಿಕಾರಿ ಡಾ.ಎಂ.ಗಂಗಾಧರನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಕ್ರಮದತ್ತ, ಅನುಸೂಯ ದೇವಿ, ಗುರುಪ್ರಸಾದ್ ರೈ, ಪದ್ಮನಾಭ ಮಾಸ್ತರ್, ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ಪಜ್ವ, ಚಂದ್ರಶೇಖರ ರೈ ಬಿ, ಮುಖ್ಯೋಪಾಧ್ಯಾಯಿನಿ ಭಾರತಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಭಾರ ಪ್ರಾಂಶುಪಾಲ ಚಂದ್ರ ಕುಮಾರ್ ಸ್ವಾಗತಿಸಿ, ಅಧ್ಯಾಪಕ ವಿಜಯ ಕುಮಾರ್ ವಂದಿಸಿದರು. ಅಧ್ಯಾಪಕ ಕಿಶೋರ್ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries