ಪೆರ್ಲ: ರಾಜ್ಯದ ರಾಜಕೀಯ ಕೊಲೆಗಳ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ. 24 ವರ್ಷಗಳ ಹಿಂದೆ ಕೊಳತ್ತೂರಿನ ಬಿಜೆಪಿ ನೇತಾರ ಮೋಹನಚಂದ್ರ ಎಂಬವರು ವಾಹನ ಅಪಘಾತದಲ್ಲಿ ಮರಣಿಸಿದರೆಂದು ಬಿಂಬಿಸಲಾಯಿತು. ಆದರೆ ಆ ಬಳಿಕ ಜಂಯಿಯಾತುಲ್ ಇಸಾನಿ ಎಂಬ ಇಸ್ಲಾಮಿಕ್ ತೀವ್ರವಾದ ಸಂಘಟನೆಯ ಬಹಿರಂಗ ಹೇಳಿಕೆ ಚಕಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಮುಖಂಡರ ಕೊಲೆಯ ಹಿಂದಿರುವವರನ್ನು ಬಯಲಿಗೆಳೆಯಲು ಎನ್ ಐ ಎ ಗೆ ಸಂಪೂರ್ಣ ತನಿಕಾ ಜವಾಬ್ದಾರಿಯನ್ನು ಸರ್ಕಾರ ನೀಡಬೇಕು ಎಂದು ಮಿಝೋರಾಂ ಮಾಜಿ ರಾಜ್ಯಪಾಲ, ಬಿಜೆಪಿ ಮಾಜೀ ರಾಜ್ಯಾಧ್ಯಕಗಷ ಕುಮ್ಮನಂ ರಾಜಶೇಖರನ್ ಅವರು ತಿಳಿಸಿದರು.
ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಎನ್.ಡಿ.ಎ. ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕುಂಟಾರು ರವೀಶ ತಂತ್ರಿ ಅವರ ಪರವಾಗಿ ಗುರುವಾರ ಸಂಜೆ ಪೆರ್ಲದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಹಾಗೂ ಸಂಘಪರಿವಾರ ಕುಕೃತ್ಯದ ಬಗ್ಗೆ ತೋರ್ಪಡಿಸುವ ಸಂಶಗಳಿಂದ ನೈಜತೆ ಅನಾವರಣಗೊಳ್ಳಲಿದೆ. ಹಲವಾರ ಕೊಲೆಗಳನ್ನು ಸಮರ್ಪಕವಾ ತನಿಖೆಗೊಳಪಡಿಸದ ಕೇರಳ ಪೋಲೀಸ್ ದೂರು-ವಿವರಗಳ ದಾಖಲಾತಿಯನ್ನು ಮರೆಮಾಚುತ್ತಿದೆ. ಈ ಹಿನ್ನೆಲೆಯಲ್ಲಿ ಎನ್ ಐ ಎ ಗೆ ತನಿಖೆಯನ್ನು ಹಸ್ಥಾಂತರಿಸಬೇಕು ಎಂದು ಅವರು ತಿಳಿಸಿದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈವಿಧ್ಯಮಯ ಜನಪರ ಯೋಜನೆಗಳು ಮಂಜೇಶ್ವರದ ಜನಸಾಮಾನ್ಯರಿಗೂ ಲಭ್ಯವಾಗಲು ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರಿಗೆ ಮತನೀಡಿ ಗೆಲ್ಲಿಸುವ ಅಗತ್ಯ ಇದೆ ಎಂದು ಅವರು ಕರೆನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್, ಕಾಸರಗೋಡು ಮಂಡಲ ಬಿಜೆಪಿ ಅಧ್ಯಕ್ಷ ಸುಧಾಮ ಗೋಸಾಡ, ಮಾಜಿ ಸಂಸದ ಎ.ವಿ.ಅಬ್ದುಲ್ಲ ಕುಟ್ಟಿ, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ವಿ.ಮ್ಯಾಥ್ಯು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.


