ಪೆರ್ಲ: ಕೊಡ್ಲಮೊಗರು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ವೃತ್ತಿಪರಿಚಯ ಮೇಳದ ಹೈಸ್ಕೂಲ್ ವಿಭಾಗದ ಥ್ರೆಡ್ ಪೇಟರ್ನ್‍ನಲ್ಲಿ ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ಮನೀಷ್ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಪೈವಳಿಕೆ ನಿವಾಸಿ ಪವಿತ್ರ ಬಲ್ಲಾಳ್- ಶಶಿಕಲ ದಂಪತಿ ಸುಪುತ್ರನಾದ ಮನೀಷ್‍ನ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
ಉಪಜಿಲ್ಲಾ ವೃತ್ತಿಪರಿಚಯ ಮೇಳದ ಹೈಸ್ಕೂಲ್ ವಿಭಾಗದ ಬುಕ್ ಬೈಂಡಿಂಗ್‍ನಲ್ಲಿ ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯ 9ನೇ ತರಗತಿಯ ಹರ್ಷಿತಾ ಎ.ಆರ್. ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಪೈವಳಿಕೆ ಅಂಬಿಕಾನ ನಿವಾಸಿ ರಾಘವ- ಜಯಂತಿ ದಂಪತಿ ಸುಪುತ್ರಳಾದ ಹರ್ಷಿತಾಳ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.


