ಬದಿಯಡ್ಕ: ನವರಾತ್ರಿ ಮಹೋತ್ಸವದ ಅಂಗವಾಗಿ ಕೊಲ್ಲಂಗಾನ ಶ್ರೀನಿಲಯದಲ್ಲಿ ಸ್ಥಳೀಯ ಶ್ರೀಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾ ಸಂಘ ಹಮ್ಮಿಕೊಂಡಿದ್ದ 30ನೇ ವರ್ಷದ ಯಕ್ಷ ದಶ ವೈಭವದ ಸಮಾರೋಪದಲ್ಲಿ ಹಿರಿಯ ಸಮಾಜ ಸೇವಕ, ಯಕ್ಷಗಾನ ನೇಪಥ್ಯ ಕಲಾವಿದ, ಪತ್ರಕರ್ತರಾಗಿದ್ದು, ಪ್ರಸ್ತುತ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿರುವ ಭಾಸ್ಕರ ಕಲ್ಲಕಟ್ಟ ಅವರನ್ನು ಸನ್ಮಾನಿಸಲಾಗಿತ್ತು. ಆದರೆ ಅನಾರೋಗ್ಯ ಕಾರಣ ಸಮಾರಂಭಕ್ಕೆ ಆಗಮಿಸಲು ಅಸಾಧ್ಯವಾಗಿ ಅವರ ಅನುಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಪ್ರದಾನಗೈಯ್ಯಲಾದ ಸನ್ಮಾನವನ್ನು ಬಳಿಕ ಅವರ ಸ್ವಗೃಹಕ್ಕೆ ತೆರಳಿ ನೀಡಲಾಯಿತು. ಕೊಲ್ಲಂಗಾನ ಶ್ರೀಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಅವರು ಭಾಸ್ಕರ ಅವರನ್ನು ಸನ್ಮಾನಿಸಿ ಅವರ ಸೇವೆಯನ್ನು ಕೊಂಡಾಡಿ, ಶೀಘ್ರ ಆರೋಗ್ಯಮುಖರಾಗುವಂತೆ ಸಂಪ್ರಾರ್ಥಿಸಿ ಅನುಗ್ರಹಿಸಿದರು. ಈ ಸಂದರ್ಭ ಶ್ರೀಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಾಸ್ಕರ ಕಲ್ಲಕಟ್ಟರಿಗೆ ಸ್ವಗೃಹದಲ್ಲಿ ಸನ್ಮಾನ
0
ಅಕ್ಟೋಬರ್ 13, 2019