ಬದಿಯಡ್ಕ: ಜೀವನಕ್ಕೊಂದು ಶಿಸ್ತು, ಬದುಕಿಗೊಂದು ಉತ್ತಮ ಸಂಸ್ಕಾರ ದೊರಕುವುದಕ್ಕೆ ಪೂರಕವಾಗಿರುವ ಭಾಷೆ0iÉುಂದರೆ ಅದು ಸಂಸ್ಕøತ ಎಂದು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್‍ಕುಮಾರ್ ರೈ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕುಂಬಳೆ ಉಪಜಿಲ್ಲೆಯ ವಿವಿಧ ಶಾಲೆಗಳ ಸಂಸ್ಕøತ ಅಧ್ಯಾಪಕರು ಜೊತೆಗೂಡಿ ಜ್ಞಾನದಾಯಿನಿ ಎಂಬ ಹೆಸರಿನಲ್ಲಿ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಆಯೋಜಿಸಿರುವ ಮೂರು ದಿನಗಳ ಶಿಬಿರವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.
ಎಷ್ಟೋ ದೊಡ್ಡ ದೊಡ್ಡ ವಿಚಾರಗಳನ್ನು ಸಂಕೀರ್ಣಗೊಳಿಸಿ ಒಂದು ಶಬ್ದದಲ್ಲಿ ಯಾ ಒಂದು ವಾಕ್ಯದ ಮೂಲಕ ಪ್ರಕಟಪಡಿಸಲು ಸಂಸ್ಕøತದ ಮೂಲಕ ಸಾಧ್ಯವಾಗುವುದು. ಇಂತಹ ದೇವಭಾಷೆ ಎಂದೇ ಪ್ರಚಲಿತವಿರುವ ಸಂಸ್ಕøತದಲ್ಲಿ ಅಡಕವಾಗಿರುವ ವಿಶೇಷತೆಗಳನ್ನು ತಿಳಿಯಪಡಿಸುವ ವಸತಿಯೊಂದಿಗಿನ ಈ ಶಿಬಿರದ ಉಪಯೋಗವನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಅವರು ಮಾತನಾಡಿ, ರಾಜ ಭಾಷೆಯಾದ ಸಂಸ್ಕøತದ ಅಧ್ಯಯನಕ್ಕೆ ಇತ್ತೀಚಿನ ದಿನಗಳಲ್ಲಿ ಆಶಾದಾಯಕ ಆಸಕ್ತರು ಮುಂದಾಗುತ್ತಿರುವುದು ಭರವಸೆ ಮೂಡಿಸಿದೆ. ಯುವಕರು, ವಿದೇಶೀಯರು ಆಕರ್ಷಿತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಕøತದ ಆಳವಾದ ಅಧ್ಯಯನವನ್ನು ಕೈಗೊಂಡವರಿಗೆ ಉತ್ತಮ ಭವಿಷ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೈ ಬದಿಯಡ್ಕ, ಮಾತೃ ಸಮಿತಿ ಅಧ್ಯಕ್ಷೆ ಪ್ರಮೀಳಾ ಗೋಸಾಡ, ರಾಜಗೋಪಾಲ ಚುಳ್ಳಿಕ್ಕಾನ, ಸಂಸ್ಕøತ ಅಕಾಡಮಿಕ್ ಕೌನ್ಸಿಲ್ ನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಡಿಗ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಸ್ವಾಗತಿಸಿ, ಶೇಣಿ ಶಾಲೆಯ ಅಧ್ಯಾಪಕ ಸುಕುಮಾರ ಬೆಟ್ಟಂಪಾಡಿ ವಂದಿಸಿದರು. ಶಿಬಿರವು ಭಾನುವಾರ ಮಧ್ಯಾಹ್ನ ಸಮಾರೋಪಗೊಳ್ಳಲಿದ್ದು, ಕುಂಬಳೆ ಉಪಜಿಲ್ಲೆಯ 22ಕ್ಕೂ ಅಧಿಕ ಶಾಲೆಗಳಿಂದ 208 ವಿದ್ಯಾರ್ಥಿಗಳು ಹಾಗೂ 18 ಅಧ್ಯಾಪಕ ಅಧ್ಯಾಪಿಕೆಯರು ಭಾಗವಹಿಸುತ್ತಿದ್ದಾರೆ. ಶಿಬಿರದ ಆರಂಭದಿಂದ ಅಂತ್ಯದ ತನಕ ಸಂಸ್ಕøತದಲ್ಲಿ0iÉುೀ ಸಂವಹನ ನಡೆಯುತ್ತಿದೆ.



