ಬದಿಯಡ್ಕ: ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಇದರ ಹಿತಚಿಂತಕ ಅಭಿಯಾನವು ಕಾಸರಗೋಡು ಜಿಲ್ಲಾ ಸೇವಾ ಪ್ರಮುಖ್ ಮಹೇಶ್ ವಳಕ್ಕುಂಜ ಇವರ ನೇತೃತ್ವದಲ್ಲಿ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಶುಕ್ರವಾರ ಜರಗಿತು.
ಸಮಾರಂಭದಲ್ಲಿ ಕಾಸರಗೋಡಿನ ನಿವೃತ್ತ ಉಪನೋಂದಾವಣಾಧಿಕಾರಿ ವೆಂಕಪ್ಪ ನಾಯ್ಕ್ ಮಾನ್ಯ ಇವರು ಹಿತ ಚಿಂತಕರಾಗುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ಅಧ್ಯಕ್ಷ ಲಕ್ಷ್ಮಣ ಪ್ರಭು ಕರಿಂಬಿಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹರಿಪ್ರಸಾದ್ ಪುತ್ರಕಳ, ಬಜರಂಗದಳ ಸಂಯೋಜಕ ಸುನಿಲ್ ಶೆಟ್ಟಿ ಬದಿಯಡ್ಕ, ಸಹ ಸಂಯೋಜಕ ಶರತ್ ಶೆಟ್ಟಿ ವಳಮಲೆ, ಮಿಥುನ್ ಬದಿಯಡ್ಕ, ಅವಿನಾಶ್ ಪೆರಡಾಲ ಸಹಿತ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.



