HEALTH TIPS

ಹುಟ್ಟೂರ ಸನ್ಮಾನ ಕೀರ್ತಿಕಿರೀಟಕ್ಕೆ ಕಲಶ: ಉಜಿರೆ- ಮೇರು ಕಲಾವಿದರಾದ ಕುಂಬ್ಳೆದ್ವಯರಿಗೆ ಹುಟ್ಟೂರಲ್ಲಿ ಗೌರವ ಸನ್ಮಾನ

     
    ಕುಂಬಳೆ: ತೆಂಕುತಿಟ್ಟು ಯಕ್ಷಗಾನದ ಮೂಲನೆಲವಾದ ಕುಂಬಳೆಯಿಂದ ಕಲಾವಿದರಾಗಿ ಹೊರಟು, ನಾಡಿನಾದ್ಯಂತ ಯಶಸ್ಸಿನ ದಿಗ್ವಿಜಯಗೈದು ಸನ್ಮಾನ, ಪ್ರಶಸ್ತಿ, ಪಾರಿತೋಷಕಗಳಿಂದ ಪುರಸ್ಕøತರಾದ ಕುಂಬಳೆ ಸುಂದರರಾವ್ ಮತ್ತು ಕುಂಬ್ಳೆ ಶ್ರೀಧರ ರಾವ್ ಅವರು ತೆಂಕಣ ಯಕ್ಷತವರಿನ ದೀಪಸ್ಥಂಭ ಸಮಾನ ಕಲಾವಿದರು. ನಾಡಿನೆಲ್ಲೆಡೆ ಆದರದ ಅಂಗೀಕಾರಗಳು ದೊರೆತ ಬಳಿಕ ಹುಟ್ಟೂರಿನಲ್ಲಿ ಸಿಗುವ ಸನ್ಮಾನ ಅವರ ಕೀರ್ತಿಯಕಿರೀಟಕ್ಕೆ ಕಲಶವಿಟ್ಟಂತೆ ಎಂದು ಖ್ಯಾತ ಅರ್ಥಧಾರಿ, ಕಲಾವಿದ ಉಜಿರೆ ಅಶೋಕ ಭಟ್ ನುಡಿದರು.
     ಸೂರಂಬೈಲು ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರದ ರಜತ ಮಹೋತ್ಸವದಂಗವಾಗಿ ಕುಂಬಳೆ ರಾಮಚಂದ್ರ ಬೆಂಗಳೂರು ಮತ್ತು ಕೆ,ದಯಾನಂದ ಪಿ.ಎಸ್.ನಗರ ನೇತೃತ್ವದಲ್ಲಿ ಆಯೋಜಿಸಿದ ವಿಶೇಷ ಯಕ್ಷಗಾನ ಬಯಲಾಟದ ವೇದಿಕೆಯಲ್ಲಿ ಕುಂಬ್ಳೆ ದ್ವಯರನ್ನು ಮೊದಲಬಾರಿಗೆ ಹುಟ್ಟೂರಿನ ಗೌರವ ಸನ್ಮಾನಗಳೊಂದಿಗೆ ಅಭಿನಂದಿಸಿದ ಸಮಾರಂಭದಲ್ಲಿ ಉಜಿರೆ ಅಶೋಕ ಭಟ್ ಅಭಿನಂದನಾ ಭಾಷಣ ಮಾಡಿದರು. ಕುಂಬಳೆ ದ್ವಯರು ಯಕ್ಷಗಾನದಲ್ಲಿ ಛಾಪೊತ್ತಿದ ಕಲಾವಿದರು. ಹಲವು ಪಾತ್ರಗಳಲ್ಲಿ ಮಾದರಿಗಳನ್ನು ಸೃಷ್ಟಿಸಿದವರು. ಅವರು ಮೆರೆದ ಪಾತ್ರಗಳನ್ನು ಅವರಿಗಿಂತ ವಿಭಿನ್ನವಾಗಿ ಚಿತ್ರಿಸಿ, ಅವರಿಗಿಂತ ಮೇಲು ಎನಿಸಿಕೊಂಡ ಕಲಾವಿದರಿಲ್ಲ. ಅನೇಕ ಕಲಾವಿದರನ್ನು ಯಕ್ಷಗಾನಕ್ಕೆ ಕೊಟ್ಟ ಕುಂಬಳೆಯ ನೆಲದಿಂದುದಿಸಿದ ಈರ್ವರು ಕಲಾವಿದರು ಈ ನಾಡಿಗೆ ಹೆಮ್ಮೆ ಎಂದು ಉಜಿರೆ ನುಡಿದರು.
    ಹುಟ್ಟೂರಿನ ಜಂಟಿ ಸನ್ಮಾನಕ್ಕೆ ಪ್ರತ್ಯುತ್ತರಿಸಿದ ಕುಂಬಳೆ ಸುಂದರರಾವ್ 'ಈ ರೀತಿಯಲ್ಲೊಂದು ಸನ್ಮಾನ ವೃದ್ಧಾಪ್ಯದ ಈ ಕಾಲದಲ್ಲಿ ತನ್ನೂರಲ್ಲಿ ಒಲಿಯುತ್ತದೆಂದು ನಿರೀಕ್ಷಿಸಿರಲಿಲ್ಲ. ಕಲಾಭಿರುಚಿ ಪಲ್ಲಟಗೊಂಡ ಕಾಲದಲ್ಲೂ ನಿನ್ನೆಗಳನ್ನು ಮೆಲುಕಿ ಸನ್ಮಾನಿಸಿರುವುದನ್ನು ಕಂಡಾಗ ಈ ನೆಲದಲ್ಲಿ ಓಡಾಡಿದ ಬಾಲ್ಯದ ನೆನಪಾಗುತ್ತದೆ ಎಂದರು. ಕುಂಬಳೆ ಶ್ರೀಧರರಾವ್ ಮಾತನಾಡಿ "ನಾವು ಒಡಗುಟ್ಟುಗಳಲ್ಲ, ನೆರೆಹೊರೆಯವರು. ಆದರೆ ಜನರು ಕುಂಬ್ಳೆದ್ವಯರೆಂದರೆ ಸೋದರರೆಂದೇ ನಂಬಿದ್ದರು. ನಾವೂ ಹಾಗಿದ್ದೆವು. ಇನ್ನೊಂದು ಜನ್ಮವಿದ್ದರೆ ಸೋದರರಾಗಿ ಜನಿಸಿ, ಕಲಾವಿದರಾಗಿಯೇ ಮೆರೆಯಬೇಕು' ಎಂದರು.
    ಮುರಳೀಧರ ಯಾದವ್ ನಾಯ್ಕಾಪು ಸಮಾರಂಭದ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಕಲಾಪೋಷಕ ಆರ್. ಕೆ. ಭಟ್ ಬೆಂಗಳೂರು, ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು. ಸಂಘಟಕ ದಯಾನಂದ ಪಿ.ಎಸ್ ಸ್ವಾಗತಿಸಿ,  ಪ್ರಸ್ತಾವಿಕ ಮಾತಾಡಿದರು. ಸಂಯೋಜಕ ಕುಂಬ್ಳೆ ರಾಮಚಂದ್ರ ಬೆಂಗಳೂರು ಉಪಸ್ಥಿತರಿದ್ದರು. ಬಳಿಕ ತೆಂಕುತಿಟ್ಟಿನ ಆಯ್ದ ಕಲಾವಿದರಿಂದ  ಚೂಡಾಮಣಿ-ಲಂಕಾದಹನ, ಇಂದ್ರಜಿತು-ಮಹಿರಾವಣ ಕಾಳಗ ಪ್ರಸಂಗದ ಬಯಲಾಟ ಜರುಗಿತು. ಭಾರೀ ಸಂಖ್ಯೆಯ ಪ್ರೇಕ್ಷಕರು ನೆರೆದು ಕಾರ್ಯಕ್ರಮದ ಕಳೆ ಏರಿಸಿದರು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries