HEALTH TIPS

ಬೆಳ್ಳೂರು ಸರ್ಕಾರಿ ಶಾಲೆ ಮಕ್ಕಳಿಂದ ಕೃಷಿಕರೊಂದಿಗೆ ಸಂವಾದ

       
    ಮುಳ್ಳೇರಿಯ: ಕೇರಳ ಸರ್ಕಾರದ ಶಿಕ್ಷಣ ಇಲಾಖೆಯ 'ಸಾಧಕರ ಜತೆ ಸಂವಾದ' ಅಭಿಯಾನದ ಭಾಗವಾಗಿ ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿಗಳು ಪ್ರಗತಿಪರ ಕೃಷಿಕ ರಾಜು ತಯ್ಯಿಲ್ ಅವರ ಮನೆ ಹಾಗೂ ಕೃಷಿ ಸ್ಥಳಕ್ಕೆ ಭೇಟಿ ನೀಡಿ ಕೃಷಿ ಚಟುವಟಿಕೆಗಳ ಮಾಹಿತಿ ಪಡೆದರು.
       ರಾಜು ತಯ್ಯಿಲ್ ಅವರ ಪುತ್ರ ಕೃಷಿ ಪದವೀಧರ ಅನಿಲ್ ರಾಜ್ ಕೃಷಿ ಚಟುವಟಿಕೆಗಳ ಮಾಹಿತಿ ನೀಡಿ ಮಾತಾಡಿ, ಕೃಷಿಯಿಂದ ದೈಹಿಕ ವ್ಯಾಯಾಮದ ಜೊತೆಗೆ ಮಾನಸಿಕ ನೆಮ್ಮದಿ ನಮ್ಮದಾಗುವುದು.ಅಂಗಡಿಗಳಿಂದ ವಿಷಯುಕ್ತ ತರಕಾರಿ ಖರೀದಿಸುವ ಬದಲು ಇರುವ ಸ್ಥಳದಲ್ಲಿ ತರಕಾರಿ ಬೀಜ ಬಿತ್ತಿ, ಪರಿಪೆÇೀಷಿಸಿದಲ್ಲಿ ದಿನ ನಿತ್ಯ ವಿಷ ರಹಿತ ಹಾಗೂ ನಮ್ಮ ಇಷ್ಟದ ತರಕಾರಿ ಲಭ್ಯವಾಗುವುದು. ಅಡಿಕೆ ಕೃಷಿಯೊಂದಿಗೆ ಬಾಳೆ, ಕರಿಮೆಣಸು ಕೊಕ್ಕೋ ಮೊದಲಾದ ಎಡೆ ಬೆಳೆಗಳನ್ನು ಬೆಳೆಯುವುದು ಸಸ್ಯಗಳನ್ನೂ ಲಾಭದಾಯಕ.ಹೈನುಗಾರಿಕೆಯಿಂದ ಮನೆ ಅಗತ್ಯದ ಹಾಲು ಸಿಗುವುದಲ್ಲದೆ ಹೆಚ್ಚುವರಿ ಹಾಲಿನ ಮಾರಾಟದ ಲಾಭದ ಜೊತೆಗೆ ಕೃಷಿ ಅಗತ್ಯದ ಗೊಬ್ಬರವೂ ಸಿಗುವುದು.ಜೀವಾಮೃತ ತಯಾರಿ ಪ್ರಾತ್ಯಕ್ಷಿಕೆ ನೀಡಿ, ಮೀನು ಸಾಕಣೆಯಿಂದಲೂ ಲಾಭ ತಂದು ಕೊಳ್ಳಬಹುದು ಎಂದರು. ಕೃಷಿತೋಟದಲ್ಲಿ ಬೆಳೆದ ವಿವಿಧ ತಳಿಗಳ ಮಾವು, ರಾಂಬುಟ್ಟಾನ್ ಇತರ ಹಣ್ಣುಗಳ ಮಾಹಿತಿ ನೀಡಿದರು.
      ಹಿರಿಯ ಶಿಕ್ಷಕ ಕುಂಞÂರಾಮ ಮಣಿಯಾಣಿ, ಅಧ್ಯಾಪಕರಾದ ಜಲಜಾಕ್ಷಿ, ಗೀತಾಂಜಲಿ, ರಾಜೇಶ್, ಅನಿಲ್ ಕುಮಾರ್, ಮಹೇಶ್‍ಕೃಷ್ಣ ತೇಜಸ್ವಿ ನೇತೃತ್ವವಹಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries