ಕಾಸರಗೋಡು: ನಾಗರಕಟ್ಟೆಯ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಶ್ರೀ ಶಾರದಾ ಭಜನಾಶ್ರಮದಲ್ಲಿ 13 ನೇ ವರ್ಷದ ಪುನ:ಪ್ರತಿಷ್ಠಾ ವಾರ್ಷಿಕೋತ್ಸವ, ಆಶ್ಲೇಷ ಬಲಿ ಸೇವೆ ಮತ್ತು 89 ನೇ ವರ್ಷದ ಏಕಾಹ ಭಜನೆ ಡಿ.29 ರಿಂದ ಜನವರಿ 1 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಡಿ.29 ರಂದು ಬೆಳಗ್ಗೆ 8 ಕ್ಕೆ ಗಣಪತಿ ಹೋಮ, 10 ಕ್ಕೆ ಆಶ್ಲೇಷ ಬಲಿ ಸೇವೆ ಪ್ರಾರಂಭ, ಮಧ್ಯಾಹ್ನ 12 ಕ್ಕೆ ಆಶ್ಲೇಷ ಬಲಿ ಸೇವೆ, 12.30 ಕ್ಕೆ ಮಹಾಪೂಜೆ, 1 ಕ್ಕೆ ಅನ್ನ ಪ್ರಸಾದ ಸಂತರ್ಪಣೆ, ರಾತ್ರಿ 9 ಕ್ಕೆ ಪೂಜೆ, ಡಿ.30 ರಂದು ರಾತ್ರಿ 8 ಗಂಟೆಗೆ ಮಹಾಪೂಜೆ ನಡೆಯುವುದು.
ಡಿ.31 ರಂದು 89 ನೇ ವರ್ಷದ ಏಕಾಹ ಭಜನೆ ಪ್ರಾರಂಭ, ಬೆಳಗ್ಗೆ 6 ಕ್ಕೆ ಗಣಪತಿ ಹೋಮ, ದೀಪ ಪ್ರತಿಷ್ಠೆ, ನಾಗತಂಬಿಲ, ಮಧ್ಯಾಹ್ನ 12.30 ಕ್ಕೆ ಪೂಜೆ, 1 ಕ್ಕೆ ಅನ್ನಪ್ರಸಾದ ಸಂತರ್ಪಣೆ, ಸಂಜೆ 6.30 ಕ್ಕೆ ಪೂಜೆ, ರಾತ್ರಿ 8.30 ಕ್ಕೆ ಹುಲ್ಪೆ ಸಮರ್ಪಣೆ, 1 ಕ್ಕೆ ಮಹಾಪೂಜೆ, ವಿಶೇಷ ಅಲಂಕಾರ, ಹೂವಿನ ಪೂಜೆ ಹಾಗು ಪ್ರಸಾದ ವಿತರಣೆ, ಜ.1 ರಂದು ಸೂರ್ಯೋದಯಕ್ಕೆ ಮಂಗಳದೊಂದಿಗೆ ದೀಪ ವಿಸರ್ಜನೆ ಜರಗಲಿದೆ.

