ಕಾಸರಗೋಡು: ಉದುಮ ಗ್ರಾಮ ಪಂಚಾಯತ್‍ನ ಮಾನಸಿಕ ಅಸ್ವಸ್ತತೆಯನ್ನು ಎದುರಿಸುತ್ತಿರುವವರಿಗಾಗಿ ನಿರ್ಮಿಸಿದ ಬಡ್ಸ್ ಪುನರ್ವಸತಿ ಕೇಂದ್ರವನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉದುಮ ಪಂಚಾಯತ್ ಅಧ್ಯಕ್ಷ ಕೆ.ಎ.ಮುಹಮ್ಮದಲಿ ಅಧ್ಯಕ್ಷತೆ ವಹಿಸಿದರು. ಕುಟುಂಬಶ್ರೀ ಜಿಲ್ಲಾ ಮಿಶನ್ ಕೋರ್ಡಿನೇಟರ್ ಟಿ.ಟಿ.ಸುರೇಂದ್ರನ್ ಯೋಜನೆಯ ವಿವರ ನೀಡಿದರು. ಪಂಚಾಯತ್ ಉಪಾಧ್ಯಕ್ಷೆ ಲಕ್ಷ್ಮಿ ಬಾಲನ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಪ್ರಭಾಕರನ್ ತೆಕ್ಕೆಕರ, ಕೆ.ಸಂತೋಷ್ ಕುಮಾರ್, ಬ್ಲಾಕ್ ಪಂಚಾಯತ್ ಸದಸ್ಯರಾದ ಅನ್ವರ್ ಮಾಂಙõÁಡ್, ವಿ.ಕುಂಞÂರಾಮನ್, ಪಂಚಾಯತ್ ಸದಸ್ಯರಾದ ಕೆ.ವಿ.ಅಪ್ಪು, ಪ್ರೀನಾ ಮಧು, ಚಂದ್ರನ್ ನಾಲಂವಾದುಕ್ಕಲ್, ವಿವಿಧ ರಾಜಕೀಯ ಪಕ್ಷಗಳ ನೇತಾರರು, ಕ್ಲಬ್‍ನ ಪದಾಧಿಕಾರಿಗಳು ಮೊದಲಾದವರು ಮಾತನಾಡಿದರು.
ಉದುಮ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಸೈನಬ ಅಬೂಬಕ್ಕರ್ ಸ್ವಾಗತಿಸಿದರು. ಅಸಿಸ್ಟೆಂಟ್ ಸೆಕ್ರೆಟರಿ ಟಿ.ಪಿ.ವೇಣುಗೋಪಾಲನ್ ವಂದಿಸಿದರು.

