ಕಾಸರಗೋಡು: ಪ್ರೆಸ್‍ಕ್ಲಬ್ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಕೆ.ಎಂ ಅಹಮ್ಮದ್ ಸಂಸ್ಮರಣೆ, ಮಾಧ್ಯಮ ಪ್ರಶಸ್ತಿ ವಿತರಣಾ ಸಮಾರಂಭ ಡಿಸೆಂಬರ್ 20ರಂದು ಮಧ್ಯಾಹ್ನ 2ಗಂಟೆಗೆ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಲಿದೆ. ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಸಮಾರಂಭ ಉದ್ಘಾಟಿಸುವರು.
ಕಾಸರಗೋಡು ಪ್ರೆಸ್‍ಕ್ಲಬ್ ವತಿಯಿಂದ ಕಾರ್ಯಕ್ರಮ ಜರುಗಲಿದೆ. ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸುವರು.ಜಿಲ್ಲಾ ಗ್ರಂಥಾಲಯ ಸಮಿತಿ ಅಧ್ಯಕ್ಷ ಪಿ.ವಿ.ಕೆ ಪನಯಾಲ್ ಸಂಸ್ಮರಣಾ ಭಾಷಣ ಮಾಡುವರು.ಉಪಾಧ್ಯಕ್ಷ ಪಿ.ವಿ ಕುಟ್ಟನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಾಷ್ಟ್ರ ದೀಪಿಕಾ ಪತ್ರಿಕೆ ಕೋಟ್ಟಾಯಂ ಬ್ಯೂರೋ ಮುಖ್ಯಸ್ಥ ರೆಜಿ ಜೋಸೆಫ್ ಅವರಿಗೆ ಕೆ. ಅಹಮ್ಮದ್ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಗುವುದು.


