ಕಾಸರಗೋಡು: ಬಾಡಿ ಬ್ಯುಲ್ಡಿಂಗ್ ಏಂಡ್ ಫಿಟ್‍ನೆಸ್ ಅಸೋಸಿಯೇಶನ್ ಆಫ್ ಕಾಸರಗೋಡು ಮತ್ತು ಪವರ್ ಹೆಲ್ತ್ ಕೇರ್ ವತಿಯಿಂದ ಜಿಲ್ಲಾ ಮಟ್ಟದ ದೇಹದಾಢ್ರ್ಯ ಸ್ಪರ್ಧೆ ಡಿಸೆಂಬರ್ 21ರಂದು ಸಆಯಂಕಾಳ 5ಕ್ಕೆ ಕಾಸರಗೋಡು ನಗರಸಭಾಂಗಣ ಸನಿಹದ ಸಂಧ್ಯಾರಾಗಂ ತೆರೆದ ಸಭಾಂಗಣದಲ್ಲಿ ಜರುಗಲಿರುವುದಾಗಿ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ 40ಕ್ಕೂ ಹೆಚ್ಚು ಜಿಮ್ನೇಶಿಯಂಗಳಿಂದ 250ರಷ್ಟು ದೇಹದಾಢ್ರ್ಯ ಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ವಿಜೇತರಿಗೆ ನಗದು ಬಹುಮಾನದೊಂದಿಗೆ ಶಾಶ್ವತ ಫಲಕ, ಪ್ರಶಸ್ತಿಪತ್ರ ನೀಡಲಾಗುವುದು. ಜಿಲ್ಲಾ ಸಬ್‍ಜ್ಯೂನಿಯರ್, ಜೂನಿಯರ್, ಸೀನಿಯರ್, ಮಾಸ್ಟರ್ಸ್ ವಿಭಾಗದಲ್ಲಿ ಹಾಗೂ 'ಮೋಡರ್ನ್ ಫಿಸ್ಕ್'ಶರೀರ ಸೌಂದರ್ಯ ಸ್ಪರ್ಧೆ-2019 ನಡೆಯಲಿರುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿಏಕ್ಕರ ರಾಜನ್, ಕೋಶಾಧಿಕಾರಿ ನಾರಾಯಣನ್ ಹಾಗೂ ಕೋರ್ಡಿನೇಟರ್ ಜಸೀಂ ವಾಲಿಬಾಲ್ ಉಪಸ್ಥಿತರಿದ್ದರು.

