HEALTH TIPS

ಶಾಲಾ ಕಲೋತ್ಸವ ಸಂಪನ್ನ: ಪಾಲ್ಘಾಟ್‍ಗೆ ಕಿರೀಟ-ಒಂಬತ್ತನೇ ಸ್ಥಾನಕ್ಕೆ ನೆಗೆದ ಕಾಸರಗೋಡು

       ಕಾಸರಗೋಡು: ಜಿದ್ದಾಜಿದ್ದಿನ ಸ್ಪರ್ಧೆಯ ಬಳಿಕ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ಪಾಲ್ಘಾಟ್ ಜಿಲ್ಲೆ ಸಮಗ್ರ ಪ್ರಶಸ್ತಿಯೊಂದಿಗೆ ಚಿನ್ನದ ಕಪ್‍ಗೆ ಮುತ್ತಿಕ್ಕಿತು.
ಅಂತಿಮ ದಿನವಾದ ಇಂದು ಮಧ್ಯಾಹ್ನ ಎಲ್ಲಾ ಸ್ಪರ್ಧೆಗಳು ಮುಗಿದಾಗ 951 ಅಂಕಗಳನ್ನು ಪಡೆದು ಪಾಲ್ಘಾಟ್ ಸಮಗ್ರ ಪ್ರಶಸ್ತಿಯನ್ನು ಉಳಿಸಿಕೊಂಡಿತು. ಕಳೆದ ವರ್ಷವೂ ಪಾಲ್ಘಾಟ್ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆದಿತ್ತು.
      949 ಅಂಕ ಪಡೆದು ಕಲ್ಲಿಕೋಟೆ ಮತ್ತು ಕಣ್ಣೂರು ಜಿಲ್ಲೆ ನಂತರದ ಸ್ಥಾನದಲ್ಲಿ ತೃಪ್ತಿ ಪಟ್ಟಿತು. 940 ಅಂಕ ಗಳಿಸಿದ ತೃಶ್ಶೂರು ಜಿಲ್ಲೆ ನಾಲ್ಕನೇ ಸ್ಥಾನವನ್ನು ಪಡೆದರೆ, 909 ಅಂಕ ಪಡೆದ ಮಲಪ್ಪುರಂ ಜಿಲ್ಲೆ ಐದನೇ ಸ್ಥಾನ ಪಡೆಯಿತು. 875 ಅಂಕ ಪಡೆದ ಕಾಸರಗೋಡು ಜಿಲ್ಲೆ 9 ನೇ ಸ್ಥಾನ ಪಡೆಯಿತು. ಕಳೆದ ಸಾಲಿನಲ್ಲಿ ಜಿಲ್ಲೆ 10ನೇ ಸ್ಥಾನದಲ್ಲಿತ್ತು.
   ಕಾಸರಗೋಡಿನ ಮಣ್ಣಿನ ಕಲೆಗಳಾದ ಯಕ್ಷಗಾನ, ಪೂರಕ್ಕಳಿ, ಎರ್ದುಕ್ಕಳಿ ಮೊದಲಾದ ಕಲಾ ಪ್ರಕಾರ ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಕಲಾಸ್ವಾದಕರು ನೆರೆದಿದ್ದರು. ಕಲೋತ್ಸವದಲ್ಲಿ ಈ ಎರಡು ಕಲೆಗಳು ಸ್ಪರ್ಧೆಗಳ ಯಾದಿಯಲ್ಲಿ ಸೇರ್ಪಡೆಗೊಂಡಿದೆ. ಮಂಗಲಂಕ್ಕಳಿ, ಆಲಾಮಿಕ್ಕಳಿ ಮೊದಲಾದವು ಸ್ಪರ್ಧೆಯ ಯಾದಿಯಲ್ಲಿ ಸ್ಥಾನ ಪಡೆಯದಿದ್ದರೂ ಪ್ರದರ್ಶನ ರೂಪದಲ್ಲಿ ಮೇಳೈಸಿದೆ. ತುಳುನಾಡಿನ ದೈವಗಳ ಪ್ರದರ್ಶನವೂ ನಡೆದಿದೆ.
        1991 ರಿಂದ ಯಕ್ಷಗಾನ : 1991 ರಲ್ಲಿ ಯಕ್ಷಗಾನ ಕಲೆಯನ್ನು ಮೊಟ್ಟಮೊದಲಾಗಿ ಶಾಲಾ ಕಲೋತ್ಸವದಲ್ಲಿ ಏರ್ಪಡಿಸಲಾಗಿತ್ತು. ಅಂದು ಕಾಸರಗೋಡಿನಲ್ಲಿ ನಡೆದ ಶಾಲಾ ಕಲೋತ್ಸವದಲ್ಲಿ ಯಕ್ಷಗಾನ ಸೇರ್ಪಡೆ ನಡೆದಿತ್ತು. ಈ ಬಗ್ಗೆ ಶಿಕ್ಷಣ ನಿರ್ದೇಶಕರು 1990 ಡಿಸೆಂಬರ್ 26 ರಂದು ಆದೇಶ ಹೊರಡಿಸಿದ್ದರು. ಅಂದಿನಿಂದ ಇಂದಿನ ವರೆಗೂ ರಾಜ್ಯ ಶಾಲಾ ಕಲೋತ್ಸವಗಳಲ್ಲಿ ಯಕ್ಷಗಾನದಲ್ಲಿ ಕಾಸರಗೋಡು ಜಿಲ್ಲೆಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ.
      ಧೂಳುಮಯ : ವಿವಿಧ ಸ್ಪರ್ಧೆಗಳು ವೇದಿಕೆ ಮೇಲೆ ಪ್ರಸ್ತುತಗೊಳ್ಳುತ್ತಿರುವಾಗ ವೇದಿಕೆಯ ಹೊರಗೆ ಧೂಳಿನ ಸಮಸ್ಯೆಗೆ ಕಾರಣವಾಗುತ್ತಿತ್ತು. ಧೂಳಿನ ಸಮಸ್ಯೆಯನ್ನು ಪರಿಹರಿಸಲು ಅಗ್ನಿಶಾಮಕ ದಳ ಪದೇ ಪದೇ ನೀರನ್ನು ಸಿಂಪಡಿಸುತ್ತಿತ್ತು. ಸಾರಿಗೆ ಸೌಕರ್ಯದ ತೊಂದರೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವೇದಿಕೆಗಳ ಅಂತರ ದೂರವಿದ್ದ ಕಾರಣದಿಂದ ಎಲ್ಲಾ ವೇದಿಕೆಗಳಿಗೆ ತೆರಳಲು ಬಹಳಷ್ಟು ತ್ರಾಸ ಅನುಭವಿಸುವಂತಾಗಿದೆ ಎಂದು ಕಲಾಸ್ವಾದಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
       ವಿವಿಧ ಜಿಲ್ಲೆಗಳು ಪಡೆದ ಅಂಕಗಳು ಇಂತಿವೆ:
ಪಾಲ್ಘಾಟ್ - 951
ಕಲ್ಲಿಕೋಟೆ-949
ಕಣ್ಣೂರು-949
ತೃಶ್ಶೂರು-940
ಮಲಪ್ಪುರಂ-909
ಎರ್ನಾಕುಳಂ-904
ತಿರುವನಂತಪುರ-898
ಕೋಟ್ಟಯಂ-894
ಕಾಸರಗೋಡು-875
ವಯನಾಡು-874
ಆಲಪ್ಪುಳ-868
ಕೊಲ್ಲಂ-860
ಪತ್ತನಂತಿಟ್ಟ-773
ಇಡುಕ್ಕಿ-722

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries