ಪೆರ್ಲ: ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಹಾಗೂ ಶಾರದಾ ಮರಾಟಿ ಮಹಿಳಾ ವೇದಿಕೆ ಇದರ ವಾರ್ಷಿಕ ಮಹಾ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಪೆರ್ಲ ಮರಾಟಿ ಬೋಡಿರ್ಂಗ್ ಹಾಲ್ ನಲ್ಲಿ ನಡೆಯಿತು.
ಶಾರದಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಬಿ.ಜಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ರಾಜಗೋಪಾಲ ನಾಯ್ಕ ವರದಿ ವಾಚಿಸಿದರು.ಕೋಶಾಧಿಕಾರಿ ಜಗದೀಶ್ ನಲ್ಕ ಲೆಕ್ಕ ಪತ್ರ ಮಂಡಿಸಿದರು. ಡಾ.ನಾರಾಯಣ ನಾಯ್ಕ ಮರಾಟಿ ಚಾರಿಟೇಬಲ್ ಟ್ರಸ್ಟ್ ನ ಬಗ್ಗೆ ಮಾಹಿತಿ ನೀಡಿದರು.
ಜೊತೆ ಕಾರ್ಯದರ್ಶಿ ಪರಮೇಶ್ವರ ನಾಯ್ಕ ನಲ್ಕ ಸ್ವಾಗತಿಸಿ,ಲಕ್ಷ್ಮಿ ಟೀಚರ್ ವಂದಿಸಿದರು.ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.


