ಕುಂಬಳೆ: ಯಕ್ಷಗಾನ ಬೊಂಬೆಯಾಟ ಮೂಲಕ ನಮ್ಮ ಉದಾತ್ತ ಧಾರ್ಮಿಕ, ಸಾಂಸ್ಕøತಿಕ ಮೌಲ್ಯಗಳು ಜಾಗೃತಗೊಳ್ಳುವುದೆಂದು ಮೊಗ್ರಾಲ್‍ಪುತ್ತೂರು ಸರ್ಕಾರಿ ಟೆಕ್ನಿಕಲ್ ಹೈಸ್ಕೂಲಿನ ವರಿಷ್ಠಾಧಿಕಾರಿ ರಾಜೀವನ್ ನೀಲಿಯಾರತ್ ಹೇಳಿದರು. ಪ್ರಾಚೀನ ಕಲೆಯಾದ ಯಕ್ಷಗಾನ ಬೊಂಬೆಯಾಟವನ್ನು ಪ್ರಚುರಪಡಿಸುತ್ತಿರುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವನ್ನು ಅವರು ಶ್ಲಾಘಿಸಿದರು.
ಮೊಗ್ರಾಲ್‍ಪುತ್ತೂರು ಸರ್ಕಾರಿ ಟೆಕ್ನಿಕಲ್ ಹೈಸ್ಕೂಲಿನಲ್ಲಿ ಬುಧವಾರ ನಡೆದ `ಶಾಲೆಯತ್ತ ಬೊಂಬೆ ಚಿತ್ತ' ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಲಯದ ಅಧ್ಯಾಪಕರಾದ ಶಶಿಧರನ್ ಹಾಗೂ ಫೆಲಿಕ್ಸ್ ಲಿಜೊ ಶುಭ ಹಾರೈಸಿದರು. ನೆಲ್ಸನ್ ಎ. ಸ್ವಾಗತಿಸಿ ರಂಜನ್ ವಂದಿಸಿದರು. ಬಳಿಕ `ನರಕಾಸುರ ವಧೆ' ಯಕ್ಷಗಾನ ಬೊಂಬೆಯಾಟ ಪ್ರದರ್ಶನ ನಡೆಯಿತು. ಪ್ರಧಾನ ಸೂತ್ರಧಾರ ಕೆ.ವಿ.ರಮೇಶ ಅವರೊಂದಿಗೆ ಸಹಸೂತ್ರಧಾರರಾಗಿ ತಿರುಮಲೇಶ ಕೆ.ವಿ., ಭವ್ಯಶ್ರೀ ಆರ್. ಬಲ್ಲಾಳ್, ಶೋಭಾ ಯು.ಆಚಾರ್ಯ ಸಹಕರಿಸಿದರು. ಫೆÇೀಕ್‍ಲ್ಯಾಂಡ್ ತ್ರಿಕರಿಪುರ ಹಾಗೂ ಡೋರ್ಫ್‍ಕೆಟಲ್ ಇವುಗಳ ಸಹಯೋಗದಲ್ಲಿ ಅಭಿಯಾನ ನಡೆಯಿತು.


