ಮುಳ್ಳೇರಿಯ: ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ತಾಯಿಗೆ ತನ್ನ ಮಗುವೇ ಪೂಜೆಗೈಯುವ ಮನಮೋಹಕ ಆಚರಣೆ `ಮಾತೃ ಪೂಜನ' ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕೀರ್ತನ ಪ್ರವೀಣ, ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಕಾರ್ಯಕ್ರಮ ನಡೆಸಿಕೊಟ್ಟರು. 6 ವರ್ಷದೊಳಗಿನ ಮಕ್ಕಳು ಪೂರ್ವಾಹ್ನ ಪೂಜೆ ನಡೆಸಿದರೆ, 6 ರಿಂದ 10 ವರ್ಷದೊಳಗಿನವರು ಅಪರಾಹ್ನ ನಡೆಸಿದರು.
ಪುಂಡರೀಕಾಕ್ಷ ಅವರು ಸೇರಿದ ತಾಯಂದಿರಿಗೆ ಅವರವರ ಬಾಳಿನಲ್ಲಿ ಅಮ್ಮನ ಮಹತ್ವವನ್ನು ಎಳೆಎಳೆಯಾಗಿ ವಿವರಿಸಿದರು. ಶಾಲಾ ಶಿಕ್ಷಕಿ ರಾಜಶ್ರೀ ಸ್ವಾಗತಿಸಿದರು. ಪ್ರೇಮಾವತಿ ಮತ್ತು ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಭಾರತೀಯ ವಿದ್ಯಾನಿಕೇತನ್ ಕಾಸರಗೋಡು ಜಿಲ್ಲಾ ಮಾತೃ ಭಾರತಿ ಸದಸ್ಯೆ ವಿದ್ಯಾ ಎ.ಸಿ. ವಂದಿಸಿದರು. ಶಾಲಾ ಮುಖ್ಯೋಪಾಧ್ಯಾಯ ಅಪ್ಪಕುಂಞÂ ಮಾಸ್ತರ್, ಶಾಲಾ ಸಮಿತಿ ಅಧ್ಯಕ್ಷೆ ಪ್ರೇಮಾ ಭಾರಿತ್ತಾಯ, ಉಪಾಧ್ಯಕ್ಷ ವೆಂಕಟ್ರಾಜ್ ಮೊದಲಾದವರು ಉಪಸ್ಥಿತರಿದ್ದರು.


