HEALTH TIPS

ಕೊಂಡೆವೂರಿನಲ್ಲಿ ಕೊಯ್ಲು ಉತ್ಸವ 2020

 
        ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಅನ್ನ ಯೋಜನೆಯ ಧಾನ್ಯಲಕ್ಷ್ಮೀ ಕೃಷಿ ಯೋಜನೆಯಡಿಯಲ್ಲಿ ಸಾವಯವ ಕೃಷಿ ಮೂಲಕ ಭತ್ತ ಬೆಳೆಸಲಾಗಿದ್ದು, ಕೃಷಿ ಆಸಕ್ತರನ್ನು ಸೇರಿಸಿ ಈ ಬೆಳೆಯನ್ನು ಕಟಾವು ಮಾಡುವ ಕೊಯ್ಲು ಉತ್ಸವವು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜ. 19 ರಂದು ಭಾನುವಾರ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಆಶ್ರಮದಲ್ಲಿ ಸೇರಿ ಮೆರವಣಿಗೆಯಲ್ಲಿ ಗದ್ದೆಗೆ ಸಾಗಿ ನಡೆಯುವ ಕೃಷಿಜಾಗೃತಿಯ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜೊತೆಗೂಡಿ ಭಾಗವಹಿಸಿ ಬೆಂಬಲಿಸಬೇಕೆಂದು ಆಶ್ರಮದ ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries