ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಸಂತೋತ್ಸವದ ಸಂದರ್ಭದಲ್ಲಿ ಪ್ರತೀವರ್ಷ ನೀಡುವಂತೆ 2018-19ನೇ ವರ್ಷದ ಶಾಲೆಯ ಉತ್ತಮ ವಿದ್ಯಾರ್ಥಿ ಪ್ರಶಸ್ತಿ `ಸ್ವರ್ಣಾಂಕುರ'ವನ್ನು ಅಭಿರಾಮ ಕಶ್ಯಪ್‍ನಿಗೆ ನೀಡಲಾಯಿತು. ದಿ. ಬೇರ್ಕಡವು ಸೀತಾರಾಮ ಭಟ್ಟರ ಸ್ಮರಣಾರ್ಥ ಮೊಮ್ಮಗ ಶಿವರಂಜನ್ ಅವರು ನೀಡುವ ದತ್ತಿನಿಧಿಯ ಚಿನ್ನದ ಪದಕ ಹಾಗೂ ಪ್ರಶಸ್ತಿಪತ್ರವನ್ನೊಳಗೊಂಡಿದೆ. ಶಾಲೆಯಲ್ಲಿ ಸತತ 10 ವರ್ಷಗಳ ಕಾಲ ವಿದ್ಯಾಭ್ಯಾಸವನ್ನು ಕೈಗೊಂಡು, ಉತ್ತಮ ಗುಣನಡತೆಯನ್ನು ಮೈಗೂಡಿಸಿಕೊಂಡು ಎಲ್ಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಆಯ್ಕೆಮಾಡಲಾಗಿದೆ. ವಿಶೇಷವಾಗಿ ವಿಜ್ಞಾನಮೇಳದಲ್ಲಿ ಆತನ ಸಾಧನೆಯನ್ನು ಗುರುತಿಸಲಾಗಿದೆ. ಕಿನ್ನಿಂಗಾರು ವೆಂಕಪ್ಪ ಮಣಿ-ಮಾಲತಿಯವರ ಪುತ್ರನಾದ ಈತ ಪ್ರಕೃತ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ವನ್ ವ್ಯಾಸಂಗ ಮಾಡುತ್ತಿದ್ದಾನೆ. ವೇದಿಕೆಯಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ರಕ್ಷಕ ಶಿಕ್ಷಕ ಸಂಘದ ಗಣೇಶ್ ಪೈ, ಪ್ರಮೀಳಾ ಗೋಸಾಡ, ಶಾಲಾ ಅಧ್ಯಕ್ಷ ಜಯಪ್ರಕಾಶ ಪಜಿಲ, ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅವರೊಂದಿಗೆ ಕಾಸರಗೋಡು ಸರ್ಕಾರೀ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಪ್ರಶಸ್ತಿ ಪ್ರಧಾನ ಮಾಡಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಅಭಿರಾಮ ಕಶ್ಯಪನಿಗೆ ಸ್ವರ್ಣಾಂಕುರ ಪ್ರಶಸ್ತಿ
0
ಜನವರಿ 15, 2020