ಬದಿಯಡ್ಕ: ಮುನಿಯೂರು ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಜ. 18ರಂದು ಶನಿವಾರ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಶನೈಶ್ವರ ಪೂಜೆಯು ನಡೆಯಲಿರುವುದು. ಅಂದು ಬೆಳಿಗ್ಗೆ 8ಕ್ಕೆ ಗಣಪತಿ ಹವನ, 9ರಿಂದ ಶ್ರೀ ಶನೈಶ್ವರ ಪೂಜೆ, 9.30ರಿಂದ ಬದಿಯಡ್ಕ ಕೊರತ್ತಿ ಬಂಟ್ಸ್ ಮಹಿಳಾ ಭಜನ ಸಂಘ ಹಾಗೂ 10.30ರಿಂದ ಶ್ರೀಮಾತಾ ಹವ್ಯಕ ಭಜನ ಸಂಘದವರಿಂದ ಭಜನೆ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿರುವುದು. ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ತಿಳಿಸಲಾಗಿದೆ.
ಜ.18ರಂದು ಮುನಿಯೂರು ದೇವಳದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ
0
ಜನವರಿ 15, 2020