ಮಂಜೇಶ್ವರ: ವಿಶ್ವಕರ್ಮ ಸಾಹಿತ್ಯ ದರ್ಶನ ಸಂವಾಹಕ ಸಮೂಹದ ನೇತೃತ್ವದಲ್ಲಿ ತೃತೀಯ ವರ್ಷದ ಸಾಹಿತ್ಯ-ಸಾಂಸ್ಕøತಿಕ ಸಮ್ಮೇಳನವಾದ ವಿಶ್ವದರ್ಶನ 2020ರ ಆಮಂತ್ರಣ ಪತ್ರಿಕೆಯನ್ನು ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮಿಗಳವರು ಬಿಡುಗಡೆಗೊಳಿಸಿದರು.
ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಜರಗಿದ ಸಮಾರಂಭದಲ್ಲಿ ವಿಶ್ವದರ್ಶನದ ಆಮಂತ್ರಣ ಬಿಡುಗಡೆಗೊಳಿಸಿ ಸಮಿತಿ ಸದಸ್ಯರಿಗೆ ಮಂತ್ರಾಕ್ಷತೆಗಳನ್ನಿತ್ತು ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿ.ಸಾ.ದ.ಸಮೂಹದ ಸಂಸ್ಥಾಪಕ ಜಯ ಮಣಿಯಂಪಾರೆ, ಸಮಾಜ ದರ್ಶನ ಸಮಿತಿ ಅಧ್ಯಕ್ಷ ಆಶೋಕ್ ಸಾನಗ, ನಿರಂಜನ ಆಚಾರ್ಯ ನೀರ್ಚಾಲು, ಸಂಚಾಲಕ ಕಿರಣ್ ಶರ್ಮ ಮಧೂರು, ವಿಶ್ವದರ್ಶನ ಮಾಧ್ಯಮ ಸಮಿತಿಯ ದೀಕ್ಷಿತಾ ಹೊಸಂಗಡಿ, ವಿಶ್ವಗಾನ ಮಂಜರಿ ಸಮಿತಿಯ ಸಂದೇಶ್ ಪುತ್ತೂರು, ರಶ್ಮಿತಾ ಆಚಾರ್ಯ ಹೊಸಂಗಡಿ, ತಾರಾನಾಥ ಆಚಾರ್ಯ ಕಡಂಬಾರ್, ಅಕ್ಷಿತಾ, ಅಮೃತಾಕ್ಷಿ ಮಾಯಿಪ್ಪಾಡಿ, ನಿವೇದಿತಾ ಕಡಂಬಾರ್, ವಿಶ್ವಕರ್ಮ ಮಹಿಳಾ ಸಮಿತಿಯ ಶೋಭ ವಿಶ್ವನಾಥ ಆಚಾರ್ಯ ಬಂದ್ಯೋಡು, ಶ್ರೀಲೇಖಾ ಜೆ.ಪಿ.ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.


