ಕಾಸರಗೋಡು: ಪ್ಲಾಸ್ಟಿಕ್ ಪೆನ್ ಗಳ ಬಳಕೆ ಕಡಿತಗೊಳಿಸುವ ಮೂಲಕ ಪ್ಲಾಸ್ಟಿಕ್‍ತ್ಯಾಜ್ಯ ಕಡಿಮೆಗೊಳಿಸುವ ಹಾಗೂ ಪ್ಲಾಸ್ಟಿಕ್ ಪೆನ್‍ಗಳ ಮರುಬಳಕೆ ಮೂಲಕ ಪ್ರಕೃತಿ ಸಂರಕ್ಷಣೆ ನಡೆಸುವ ಉದ್ದೇಶದೊಂದಿಗೆ ಹಸಿರು ಕೇರಳ ಮಿಷನ್. ಜಿಲ್ಲೆಯಲ್ಲಿ ಆರಂಭಿಸಿರುವ ಪೆನ್ ಫ್ರೆಂಡ್ ಯೋಜನೆ ರಾಜಪುರಂ ಸಂತ ಪಯಾಸ್ ಟೆಂತ್ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು.
ಯೋಜನೆ ಆರಂಭಗೊಂಡಂದಿನಿಂದ ಕಾಲಜಿನಲ್ಲಿ 24ಕಿಲೋ ಪೆನ್ ಗಳ ಸಂಗ್ರಹವಾಗಿದೆ. ಕಾಲೇಜಿನ ಭೂಮಿತ್ರ ಸೇನೆ, ಎನ್.ಎಸ್.ಎಸ್.ಘಟಕಗಳ ಸಹಕಾರದೊಂದಿಗೆ ಈ ಯೋಜನೆ ಜಾರಿಗೊಂಡಿದೆ. ಈ ಸಂಬಂಧ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಸಂಗ್ರಹಿಸಲಾದ ಪೆನ್ನುಗಳನ್ನು ಅಪರ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರಿಗೆ ಹಸ್ತಾಂತರಿಸಲಾಯಿತು. ಹಸಿರು ಕೇರಳ ಜಿಲ್ಲಾ¸ಮಿತಿ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಹೊಸದುರ್ಗ ತಹಸೀಲ್ದಾರ್ ಮಣಿರಾಜ್, ಎನ್.ಎಸ್.ಎಸ್. ಘಟಕ ಸಂಚಾಲಕ ಡಾ.ಎನ್.ವಿ. ವಿನೋದ್, ಭೂಮಿತ್ರ ಸೇನೆ ಸಂಚಾಲಕಿ ಪಾರ್ವತಿಮೊದಲಾದವರು ನೇತೃತ್ವವಸಿದ್ದರು.
ಪ್ಲಾಸ್ಟಿಕ್ ನಿಷೇಧ ಜಾರಿ ಸಂಬಂಧ ಸಭೆ:
ಕಾಞಂಗಾಡ್ ವಲಯ ಕಂದಾಯಾಧಿಕಾರಿ ವ್ಯಾಪ್ತಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಡಿ ಪ್ಲಾಸ್ಟಿಕ್ ನಿಷೇಧದಕ್ಷಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಯಿತು. ಅಪರ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಅವರು ಆದೇಶ ಪಾಲನೆ ವೇಳೆ ಗಮನಿಸಬೇಕಾದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಹಸಿರು ಕೇರಳ ಮಿಷನ್ ಜಿಲ್ಲಾ ಸಮಿತಿಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಅವರು ನಿಷೇಧಿತ ಉತ್ಪನ್ನಗಳಪರ್ಯಾಯ ವ್ಯವಸ್ಥೆಗಳು, ಕಾನೂನು ಉಲ್ಲಂಘಿಸಿದರೆ ಶಿಕ್ಷೆ ಇತ್ಯಾದಿ ವಿಚಾರಗಳಲ್ಲಿ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಈ ವರೆಗೆ ನಡೆಸಿದ ಚಟುವಟಿಕೆಗಳ ವರದಿ ಸಲ್ಲಿಸಿದರು. ಹೊಸದುರ್ಗ ತಹಸೀಲ್ದಾರ್ ಮಣಿರಾಜ್, ವ್ಯಾಪಾರಿಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು. ಶುಚಿತ್ವಮಿಷನ್ ಕಾರ್ಯಕ್ರಮ ಅಧಿಕಾರಿ ರಂಜಿತ್ ಸ್ವಾಗತಿಸಿದರು.
ರಾಜ್ಯ ಶುಚಿತ್ವ ಸಂಗಮಕ್ಕೆ'ಫ್ರೀಡಂ ಪೆನ್':
ಹೊಸದುರ್ಗ ಜಿಲ್ಲಾ ಜೈಲಿನಲ್ಲಿ ನಿರ್ಮಿಸಲಾದ 2 ಸಾವಿರ ಪ್ರಕೃತಿ ಸ್ನೇಹಿ ಕಾಗದದ ಫ್ರೀಡಂ ಪೆನ್ ಗಳನ್ನು ಹಸಿರು ಕೇರಳ ಮಿಷನ್ ವತಿಯಿಂದ ಜ.21,22ರಂದು ತಿರುವನಂತಪುರಂನಲ್ಲಿ ನಡೆಯುವ ರಾಜ್ಯ ಮಟ್ಟದ ಶುಚಿತ್ವ ಸಂಗಮ ಕಾರ್ಯಕ್ರಮಕ್ಕಾಗಿ ರವಾನಿಸಲಾಗಿದೆ.
ಈ ಸಂಬಂಧ ಜಿಲ್ಲಾ ಜೈಲಿನಲ್ಲಿ ನಡೆದ ಸಮಾರಂಭದಲ್ಲಿ ಜೈಲು ವರಿಷ್ಠಾಧಿಕಾರಿ ಕೆ.ವೇಣು ಅವರು ಹಸಿರು ಕೇರಳ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಅವರಿಗೆ ಹಸ್ತಾಂತರಿಸಿದರು. ಸಹಾಯಕ ವರಿಷ್ಠಾಧಿಕಾರಿ ಪಿ.ಗೋಪಾಲಕೃಷ್ಣನ್, ಸಹಾಯಕ ಜೈಲು ಅಧಿಕಾರಿ ಕೆ.ಪಿ.ಬಿಜು, ಕೆ.ಸುಮೋದ್ ಉಪಸ್ಥಿತರಿದ್ದರು. ರಾಜ್ಯ ಮಟ್ಟದ ಶುಚಿತ್ವ ಸಂಗಮದಲ್ಲಿ ಕಾಞಂಗಾಡ್, ನೀಲೇಶ್ವರ ನಗರಸಭೆಗಳ , ಬೇಡಡ್ಕ, ಮಡಿಕೈ, ಕಿನಾನೂರು-ಕರಿಂದಳಂ, ಚೆರುವತ್ತೂರು,ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ಗಳ ಮಂದಿ ಜಿಲ್ಲೆಯನ್ನು ಪ್ರತಿನಿಧಿಸುವರು. ಈ ವೇಳೆ ನಡೆಯುವ ವಸ್ತುಪ್ರದರ್ಶನದಲ್ಲಿ ಮಡಿಕೈ,ಬೆಡಡ್ಕ ಪ್ರದೇಶಗಳಿಮದ ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳ ಬದಲಿಗೆ ಬಳಸುವ ಪ್ರಕೃತಿ ಸ್ನೇಹಿ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗುವುದು.
ಚಿತ್ರ ಮಾಹಿತಿ: ರಾಜಪುರಂ ಸಂತ ಪಯಾಸ್ ಟೆಂತ್ ಕಾಲೇಜಿನಲ್ಲಿ ಸಂಗ್ರಹಿಸಲಾದ ಪ್ಲಾಸ್ಟಿಕ್ ಪೆನ್‍ಗಳನ್ನು ಅಪರ ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್ ಅವರಿಗೆ ಹಸ್ತಾಂತರಿಸಲಾಯಿತು. ಹಸಿರು ಕೇರಳ ಜಿಲ್ಲಾ¸ಮಿತಿ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ತಹಸೀಲ್ದಾರ್ ಮಣಿರಾಜ್ ಮುಂತಾದವರು ಉಪಸ್ಥಿತರಿದ್ದರು.


