ಕಾಸರಗೋಡು: ಸೀತಾಂಗೋಳಿಯ ಎ.ಕೆ.ಜಿ.ನಗರ ಸರ್ಕಾರಿ ಐ.ಟಿ.ಐ.ಯಲ್ಲಿ ಸಿವಿಲ್ ಟ್ರೇಡ್ ನಲ್ಲಿ ತೆರವಾಗಿರುವ ಅತಿಥಿಉಪನ್ಯಾಸಕ ಹುದ್ದೆಗೆ ನೇಮಕಾತಿ ಸಂಬಂಧ ಸಂದರ್ಶನ ಜ.17ರಂದು ಬೆಳಗ್ಗೆ 11 ಗಂಟೆಗೆ ಸಂಸ್ಥೆಯ ಕಾರ್ಯಾಲಯದಲ್ಲಿ ನಡೆಯಲಿದೆ.
ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ, ಮೂರು ವರ್ಷಗಳ ಡ್ರಾಫ್ಟ್ ಮನ್ ಸಿವಿಲ್ ಟ್ರೇಡ್ ನಲ್ಲಿ ಎನ್.ಟಿ.ಐ. ಮತ್ತು ಮೂರು ವರ್ಷದ ವೃತ್ತಿ ಅನುಭವ, ಎನ್.ಎ.ಸಿ ಮತ್ತು ಒಂದು ವರ್ಷದ ವೃತ್ತಿ ಪರಿಚಯ ಇರುವವರು ಹಾಜರಾಗಬಹುದು. ದೂರವಾಣಿ ಸಂಖ್ಯೆ: 9495194099, 9497300513.
ಇಂದು ಟಾಸ್ಕ್ ಫೆÇೀರ್ಸ್ ಸಭೆ:
ಬಾಲಕಾರ್ಮಿಕತನ ನಿವಾರಣೆ ಸಂಬಂಧ ರಚಿಸಲಾದ ಜಿಲ್ಲಾ ಮಟ್ಟದ ಟಾಸ್ಕ್ ಫೆÇೀರ್ಸ್ ಸಭೆ ಜ.16ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಅವರ ಛೇಂಬರ್ ನಲ್ಲಿ ನಡೆಯಲಿದೆ. ಸರ್ಟಿಫಿಕೆಟ್ ವಿತರಣೆ ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 2019 ನವೆಂಬರ್ ತಿಂಗಳಲ್ಲಿ ನಡೆದ ಕೆ-ಟೆಟ್ ಪರೀಕ್ಷೆ ಯಲ್ಲಿ ತೇರ್ಗಡೆಹೊಂದಿರುವವರ ಸರ್ಟಿಫಿಕೆಟ್ ವಿತರಣೆ ಜ.24,25,27ರಂದು ಜಿಲ್ಲಾ ಶಿಕ್ಷಣ ಕಚೇರಿಯಲ್ಲಿ ನಡೆಯಲಿದೆ. 24ರಂದು ಬೆಳಗ್ಗೆ 10 ಗಂಟೆಯಿಂದ ಕ್ಯಾಟಗರಿ 2, ಮಧ್ಯಾಹ್ನ 1 ಗಂಟೆಯಿಂದ ಕ್ಯಾಟಗರಿ 2, 25ರಂದು ಬೆಳಗ್ಗೆ 10 ಗಂಟೆಯಿಂದ ಕ್ಯಾಟಗರಿ 2, 27ರಂದು ಬೆಳಗ್ಗೆ 10 ರಿಂದ ಕ್ಯಾಟಗರಿ 3, ಮಧ್ಯಾಹ್ನ 1 ಗಂಟೆಯಿಂದ ಕ್ಯಾಟಗರಿ 4 ವಿಭಾಗದ ಮಂದಿಗೆ ಸರ್ಟಿಫಿಕೆಟ್ ವಿತರಣೆ ನಡೆಯಲಿದೆ. ದೂರವಾಣಿ ಸಂಖ್ಯೆ: 04994-230053.

