HEALTH TIPS

ಜಿಲ್ಲೆಯ ಶಿಕ್ಷಣಾಲಯಗಳಲ್ಲಿ ಲಭಿಸಲಿದೆ "ಟೇಸ್ಟ್ ಕ್ಯಾಶ್ಯೂ"

      ಕಾಸರಗೋಡು: ಶಾಲೆಯ ಚಟುವಟಿಕೆಗಳ ಬಿಡುವಿನ ವೇಳೆ ಇನ್ನು ಮುಂದೆ ಚಾಕಲೆಟ್, ಮಿಠಾಯಿ ಇತ್ಯಾದಿಗಳನ್ನುಸೇವಿಸಿ ಆರೋಗ್ಯಕ್ಕೆ ಹಾನಿಮಾಡಿಕೊಳ್ಳುವ ದಿನಗಳೂ ದೂರವಾದುವು. ಬದಲಿಗೆ ವಿದ್ಯಾರ್ಥಿಗಳಿಗೆ ಆರೋಗ್ಯ ಪೂರ್ಣ ರುಚಿಯ ಅನುಭವ ನೀಡಲು ಜಾರಿಗೆ ಬರುತ್ತಿದೆ "ಟೇಸ್ಟ್ ಕ್ಯಾಶ್ಯೂ". ಜಿಲ್ಲೆಗೆ ನೂತನ ವರ್ಷದ ಕೊಡುಗೆಯಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ಈ ನೂತನ ಉತ್ಪನ್ನ ಜಾರಿಗೆ ತರುತ್ತಿದೆ. 
       ವಿದ್ಯಾರ್ಥಿಗಳಲ್ಲಿ ಉತ್ತಮ ಆಹಾರ ಕ್ರಮದ ಅಭ್ಯಾಸ ಬೆಳೆಸುವ ನಿಟ್ಟಿನಲ್ಲಿ ಕುಟುಂಬಶ್ರೀ ಜಿಲ್ಲಾ ಮಿಷನ್ ಜ.1ರಿಂದ ಟೇಸ್ಟ್ ಕ್ಯಾಶ್ಯೂ(ರುಚಿಕರ ಗೋಡಂಬಿ) ವಿದ್ಯಾಲಯಗಳಿಗೆ ತಲಪಿಸುತ್ತಿದೆ. ಸಿಹಿ, ತೆಂಗಿನಕಾಯಿ, ನೀಲಕಡಲೆ, ಗೋಡಂಬಿ, ಅಕ್ಕಿ ಪುಡಿ ಇತ್ಯಾದಿ ಬಳಸಿ ಉತ್ಪನ್ನ ಸಿದ್ಧಪಡಿಸಲಾಗುವುದು. ಚಾಕಲೆಟ್ ಇತ್ಯಾದಿ ಸೇವನೆಯಿಂದ ಬರಬಹುದಾದ ಆರೋಗ್ಯ ಸಮಸ್ಯೆ ನಿಯಂತ್ರಣದ ಜೊತೆಗೆ ಅವುಗಳ ರ್ಯಾಪರ್ ಇತ್ಯಾದಿಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಯನ್ನೂ ಈ ಮೂಲಕ ನಿಯಂತ್ರಿಸಲು ಸಾಧ್ಯ. ಜಿಲ್ಲೆಯ ಕುಟುಂಬಶ್ರೀಯ ಘಟಕವಾಗಿರುವ ಸಫಲಂ ಕ್ಯಾಶ್ಯೂ ಪರೆಂಗಿನಟ್ಸ್ ನ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಧಾರಾಳ ಬೇಡಿಕೆ ಹೊಂದಿವೆ. ಇವುಗಳೊಂದಿಗೆ ಟೇಸ್ಟ್ ಕ್ಯಾಶ್ಯೂ"ವನ್ನೂ ಈ ಸಂಸ್ಥೆ ಮಾರುಕಟ್ಟೆಗಿಳಿಸುತ್ತಿದೆ.
     ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಜಿಲ್ಲಾ ಶಿಕ್ಷಣ ಅಧಿಕಾರಿ ನಂದಿಕೇಶನ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ಉಪಸ್ಥಿತರಿದ್ದರು.   
     ಇಂದು ಉದ್ಘಾಟನೆ:
   "ಟೇಸ್ಟ್ ಕ್ಯಾಶ್ಯೂ" ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಇಂದು (ಜ.1ರಂದು) ಮಧ್ಯಾಹ್ನ 12 ಗಂಟೆಗೆ ನಾಯನ್ಮಾರುಮೂಲೆ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಚಾಲನೆ ನೀಡುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries