ಮಂಜೇಶ್ವರ: ಮೀಯಪದವು ಶ್ರೀ ಅಯ್ಯಪ್ಪ ಭಜನಾಮಂದಿರದ ಜೀರ್ಣೋದ್ಧಾರ ಹಾಗೂ ನೂತನ ಭವ್ಯ ಮಂದಿರದ ನಿರ್ಮಾಣ ನಿರ್ವಹಣೆಗೆ ಈಗಾಗಲೇ ಜೀರ್ಣೋದ್ಧಾರ ಸಮಿತಿ ರಚಿಸಲಾಗಿದ್ದು ಪೂರಕವಾಗಿ ಇತ್ತೀಚೆಗೆ ಮಹಿಳಾ ಸಮಿತಿಯನ್ನು ರಚಿಸಲಾಯಿತು.
ಗೌರವಸಲಹೆಗಾರರಾಗಿ ಸರೋಜ ಟೀಚರ್ ಮೀಯಪದವು, ಪುಷ್ಪಾವತಿ ಕಿಟ್ಟಣ್ಣ ರೈ ಕಳ್ಳಿಗೆ, ಸರೋಜಿನಿ ಪದ್ಮನಾಭನ್ ನಾಯರ್ ಜೋಡುಕಲ್ಲು ಅವರನ್ನು ಆರಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಶಾಂತಾ ಸಿ ನಾಯಕ್ ಮೀಯಪದವು, ಕಾರ್ಯಾಧ್ಯಕ್ಷರು ನಳಿನಿ ಟೀಚರ್, ಉಪಾಧ್ಯಕ್ಷರು ಹೇಮಮಾಲಿನಿ ಟೀಚರ್ ಮದಂಗಲ್ಲು, ಕುಸುಮಾ ಮೋಹನ ಬೆಜ್ಜ, ರಾಜಲಕ್ಷ್ಮಿ ದೇರಂಬಳ, ರಾಧಾಮಣಿ ಟೀಚರ್ ಮೀಯಪದವು , ಹರಿಣಾಕ್ಷಿ ಬೇರಿಕೆ, ಹರಿಣಾಕ್ಷಿ ಕುಳೂರು, ಪೂರ್ಣಿಮ ಹರೀಶ ದರ್ಬೆ, ಪ್ರಧಾನ ಸಂಚಾಲಕರು ಶೋಭಾ ರಾಜೇಶ್ ಬೆಜ್ಜಂಗಳ, ಪ್ರದಾನ ಕಾರ್ಯದರ್ಶಿ ಸುಮನಾ ತಿಮ್ಮಪ್ಪ ಮೈತಾಳ್, ಸಂಘಟನಾ ಕಾರ್ಯದರ್ಶಿ ಲತಾ ದೇವಿ ಅಡ್ಕದ ಗುರಿ, ಜೊತೆ ಕಾರ್ಯದರ್ಶಿ ಸೌಮ್ಯ ಪ್ರಕಾಶ್ ಮದಂಗಲ್ಲು, ಜಯಲಕ್ಷ್ಮಿ ರವೀಂದ್ರ ಚಿಗುರುಪಾದೆ, ಯಶೋಧ ಗಂಗಾಧರ ಮೀಯಪದವು, ಮಲ್ಲಿಕಾ ರಾಮಚಂದ್ರ ಗಟ್ಟಿ, ಕವಿತಾ ಶ್ರೀನಿವಾಸ ಪಂಚಮಿ, ಲಲಿತಾ ತಿಮ್ಮಪ್ಪ, ರಾಜೇಶ್ವರೀ ಎಸ್ ರಾವ್, ಹಾಗೂ ನೂರು ಮಂದಿ ಕಾರ್ಯಕಾರಿಣಿ ಸದಸ್ಯೆಯರನ್ನು ಆರಿಸಲಾಯಿತು.
ಸಭೆಯಲ್ಲಿ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಅಧ್ಯಕ್ಷತೆವಹಿಸಿದ್ದು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಧರ ರಾವ್ ಆರ್ ಎಂ, ರಂಜಿತ್ ಗುರುಸ್ವಾಮಿ, ಮಂದಿರದ ಶ್ರೀನಿವಾಸ ಪಂಚಮಿ, ರಾಜಾರಾಮ ರಾವ್ ಮೀಯಪದವು ಆನಂದ ಕೋಡಿ ಭಾಗವಹಿಸಿದ್ದರು. ಪುಷ್ಪರಾಜ ಶೆಟ್ಟಿ ತಲೇಕಳ ಸಭೆ ನಿರ್ವಹಿಸಿದರು.




