ಮಧೂರು: ಗಡಿನಾಡಿನ ಹಿರಿಯ ಸಾಹಿತಿ ಸಿರಿಬಾಗಿಲು ವೆಂಕಪ್ಪಯ್ಯರ ಸ್ಮರಣಾರ್ಥ ಸಿರಿಬಾಗಿಲಲ್ಲಿ ನಿರ್ಮಾಣಗೊಳ್ಳಲಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದ ಶಿಲಾನ್ಯಾಸ ಸಮಾರಂಭ ಜ. 18 ರಂದು ಶನಿವಾರ ಜರಗಲಿದ್ದು ಆ ಬಗೆಗಿನ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಅರ್ಚಕ ವೇ.ಮೂ. ಪ್ರಭಾಕರ ಕಾರಂತ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಸಿದರು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕøತಿಕ ಭವನ ನಿರ್ಮಾಣ ಸಮಿತಿಯ ಕೋಶಾಧಿಕಾರಿ ಲಕ್ಷ್ಮೀನಾರಾಯಣ ಕಾವು ಮಠ, ಪುಳ್ಕೂರು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶೀನ ಶೆಟ್ಟಿ ಕಜೆ ಪುಳ್ಕೂರು, ಯೋಗೀಶ ರಾವ್ ಚಿಗುರುಪಾದೆ, ಎದುರ್ಕಳ ಸದಾಶಿವ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶಿಲಾನ್ಯಾಸ ಸಮಾರಂಭದ ಯಶಸ್ಸುಗೊಳಿಸುವ ಬಗ್ಗೆ ಸಲಹೆ ಸೂಚನೆ ನೀಡಿದರು.
ಸಮಾರಂಭದಲ್ಲಿ ಯಕ್ಷಬಳಗ ಹೊಸಂಗಡಿ ಸಂಸ್ಥೆಯ ಸಂಚಾಲಕ ಸತೀಶ ಅಡಪ ಸಂಕಬೈಲು, ಜಯರಾಮ ಕಾರಂತ. ತಲ್ಪಣಾಜೆ ವೆಂಕಟರಮಣ ಭಟ್, ಕಿಶೋರ್ ಕೂಡ್ಲು, ಅನಿಲ್ ಪಕಳ, ಶಿವರಾಮ ಕಾಸರಗೋಡು, ರವೀಂದ್ರ ಶೆಟ್ಟಿ ಪಾಲ್ತೋಡು, ಸುಬ್ರಹ್ಮಣ್ಯ ಹೊಳ್ಳ ಮುಳಿಯಾರು, ಕ್ಷೇತ್ರ ಆಡಳಿತ ಮಂಡಳಿ ಸದಸ್ಯರಾದ ಜಯರಾಮ ರೈ , ಯಸ್.ಯಮ್.ಸಿ. ಕ್ಲಬ್ ಸದಸ್ಯರು, ಮಹಾದೇವ ಯುವರಂಗದ ಅಧ್ಯಕ್ಷರು ಹಾಗೂ ಸದಸ್ಯರು, ಮಹಿಳಾಮಂಡಳಿ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ಸಿನ ಬಗ್ಗೆ ಸಮಾಲೋಚಿಸಿದರು.





