HEALTH TIPS

ಜಿಯೋದಿಂದ ಗ್ರಾಹಕರಿಗೆ ಆಡಿಯೋ, ವೀಡಿಯೊ ವೈಫೈ ಕರೆ ಮಾಡುವ ಅವಕಾಶ

     
      ಮುಂಬೈ: ತನ್ನ ಗ್ರಾಹಕರಿಗೆ ಇನ್ನಷ್ಟು ಉತ್ತಮ ಉತ್ಪನ್ನಗಳು ಮತ್ತು ಅನುಭವವನ್ನು ನೀಡಲು ಮುಂದಾಗಿರುವ ರಿಲಯನ್ಸ್ ಜಿಯೋ, ನಿನ್ನೆ  ರಾಷ್ಟ್ರವ್ಯಾಪಿ ಆಡಿಯೋ ಮತ್ತು ವಿಡಿಯೋ ಓವರ್ ವೈ-ಫೈ ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.
      ಪ್ರಾರಂಭದಲ್ಲಿಯೇ ಪ್ರತಿಯೊಬ್ಬ ಗ್ರಾಹಕರಿಗೆ ಉತ್ತಮವಾದ ಅನುಭವವನ್ನು ಒದಗಿಸಲು ಜಿಯೋ ಕಳೆದ ಕೆಲವು ತಿಂಗಳುಗಳಿಂದ ಈ ಸೇವೆಯನ್ನು ಪರೀಕ್ಷಿಸುತಿತ್ತು. ಇದೀಗ ಆಡಿಯೋ, ವಿಡಿಯೋ ಕರೆ ಮಾಡುವ ಸೇವೆಗೆ ಚಾಲನೆ ನೀಡಿದ್ದು, ಗ್ರಾಹಕರು ಜಿಯೊ ವೈಫೈ ಕರೆ ಮಾಡಲು ಯಾವುದೇ ವೈ-ಫೈ ಸಂಪರ್ಕ ಜಾಲವನ್ನೂ ಬಳಸಬಹುದು.
     ಆಡಿಯೋ ಮತ್ತು ವಿಡಿಯೊ ಕರೆಗಳು VoLTE ಮತ್ತು Wi-Fi ನಡುವೆ ಬದಲಾಗಲಿವೆ. ಜಿಯೋ ವೈ-ಫೈ ಕರೆ ಚಾಲನೆಗೊಳಿಸಲು,  Jio.com/wificalling  ನಲ್ಲಿ ವಿವರಗಳಿವೆ. ಇದೇ 16ರ ಒಳಗೆ ದೇಶದಾದ್ಯಂತ ಈ ಸೇವೆ ವಿಸ್ತರಣೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
     ವೈಫೈ ಮೂಲಕ ಸ್ಪಷ್ಟವಾದ ವಾಯ್ಸ್ ಮತ್ತು ವಿಡಿಯೊ ಕರೆ ಸಾಧ್ಯವಾಗಲಿದ್ದು ಇದಕ್ಕಾಗಿ ಹೆಚ್ಚಿನ ಶುಲ್ಕ ತೆರಬೇಕಾಗಿಲ್ಲ ಎಂದು ಜಿಯೊ ಭರವಸೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries