ಪೆರ್ಲ:ಅಭಿವೃದ್ಧಿ ಹೆಸರಿನಲ್ಲಿ ಮಾನವ ಪರಿಸರದ ಮೇಲೆ ದಾಳಿಯ ಪರಿಣಾಮ ಸಮೃದ್ದವಾಗಿದ್ದ ಅರಣ್ಯ ಸಂಪತ್ತು ಬಯಲು ಸೀಮೆಯಾಗಿದೆ.ಕಾಲಕಾಲಕ್ಕೆ ಸುರಿಯುತ್ತಿದ್ದ ಮಳೆ ಅಕಾಲಿಕವಾಗಿದೆ.ಮಳೆನಾಡಿನಲ್ಲೂ ಹನಿ ನೀರಿ ಹಾಹಾಕಾರ ಸೃಷ್ಠಿಯಾಗಿದೆ.ಇದು ಮುಂದುವರಿದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು 'ಸಮಕಾಲಿಕ' ಮಲಯಾಳಂ ಸಾಪ್ತಾಹಿಕದ ಸಾಮಾಜಿಕ ಸೇವಾ ಪ್ರಶಸ್ತಿಗೆ ಭಾಜನರಾದ ಪರಿಸರ ಮತ್ತು ಸಾಮಾಜಿಕ ಹೋರಾಟಗಾರ, ಸ್ಥಳೀಯ ವೈದ್ಯ ಡಾ.ವೈ.ಎಸ್. ಮೋಹನಕುಮಾರ್ ಹೇಳಿದರು.
ಸ್ವರ್ಗ ಸ್ವಾಮೀ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕಾನಂದ ಜಯಂತಿ, ಶಾಲಾ ವಾರ್ಷಿಕೋತ್ಸವ ಮತ್ತು ಹೆತ್ತವರ ದಿನಾಚರಣೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಅಭಿವೃದ್ಧಿ ಹೆಸರಿನಲ್ಲಿ ಮನುಷ್ಯನ ಜೀವಕ್ಕೆ ಅವಶ್ಯವಾದ ಪರಿಸರವನ್ನು ನಾಶಮಾಡುತ್ತಿರುವ ಪರಿಣಾಮ ಉಸಿರಾಡಲು ಶುದ್ದ ಗಾಳಿ, ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.ಇಷ್ಟೆಲ್ಲಾ ದುಷ್ಪರಿಣಾಮಗಳು ಎದುರಾದರೂ ಮಾನವನಿಗೆ ಪರಿಸರದ ಕಾಳಜಿ ಇನ್ನೂ ಮೂಡಿಲ್ಲ.ವ್ಯಕ್ತಿಗಳ ವ್ಯಕ್ತಿತ್ವ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಪರಿಸರ ಸಂರಕ್ಷಣೆ ಅಸಾಧ್ಯ. ಅಭಿವೃದ್ಧಿ ಹೆಸರಿನಲ್ಲಿ ಮಾನವ ಪರಿಸರದ ಮೇಲೆ ದಾಳಿಯ ಪರಿಣಾಮ ಸಮೃದ್ದವಾಗಿದ್ದ ಅರಣ್ಯ ಸಂಪತ್ತು ಬಯಲು ಸೀಮೆಯಾಗಿದೆ.ಕಾಲಕಾಲಕ್ಕೆ ಸುರಿಯುತ್ತಿದ್ದ ಮಳೆ ಅಕಾಲಿಕವಾಗಿದೆ.ಮಳೆನಾಡಿನಲ್ಲೂ ಹನಿ ನೀರಿ ಹಾಹಾಕಾರ ಸೃಷ್ಠಿಯಾಗಿದೆ.ಇದು ಮುಂದುವರಿದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು 'ಸಮಕಾಲಿಕ' ಮಲಯಾಳಂ ಸಾಪ್ತಾಹಿಕದ ಸಾಮಾಜಿಕ ಸೇವಾ ಪ್ರಶಸ್ತಿಗೆ ಭಾಜನರಾದ ಪರಿಸರ ಮತ್ತು ಸಾಮಾಜಿಕ ಹೋರಾಟಗಾರ, ಸ್ಥಳೀಯ ವೈದ್ಯ ಡಾ.ವೈ.ಎಸ್. ಮೋಹನಕುಮಾರ್ ಹೇಳಿದರು.
ಯಕ್ಷಗಾನ ಭಾಗವತಿಕೆಯ ತೌಲನಿಕ ಅಧ್ಯಯನ, ಸಂಶೋಧನಾ ಪ್ರಬಂಧ ಮಂಡನೆಗೆ ಕಣ್ಣೂರು ವಿಶ್ವ ವಿದ್ಯಾನಿಲಯದ ಡಾಕ್ಟರೇಟ್ ಪದವಿ ದೊರೆತ ಯಕ್ಷಗಾನ ಭಾಗವತ ಶಿಕ್ಷಕ ಡಾ.ಸತೀಶ್ ಪುಣಿಂಚತ್ತಾಯ ಅವರು ಅಧ್ಯಕ್ಷತೆ ವಹಿಸಿ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಇಂಟನ್ರ್ಯಾಷನಲ್ ಪೀಸ್ ಯುನಿವರ್ಸಿಟಿ ಜರ್ಮನಿ ಇದರ ಗೌರವ ಡಾಕ್ಟರೇಟ್ ಗೆ ಅರ್ಹರಾದ ತೆಂಕುತಿಟ್ಟು, ಬಡಗುತಿಟ್ಟು ಯಕ್ಷಗಾನ ಕ್ಷೇತ್ರದ ಸವ್ಯಸಾಚಿ ಕಲಾವಿದ ಸತ್ಯನಾರಾಯಣ ಪುಣಿಂಚಿತ್ತಾಯ ಅವರನ್ನು ಅಭಿನಂದಿಸಲಾಯಿತು. ಶಾಲಾ ಶಿಕ್ಷಕ ವೆಂಕಟ ವಿದ್ಯಾಸಾಗರ್ ಅಭಿನಂದಿತರನ್ನು ಪರಿಚಯಿಸಿದರು. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಅರ್ಥಶಾಸ್ತ್ರ ಉಪನ್ಯಾಸಕಿ ವಾಣಿ ಕೆ.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪಡ್ರೆ ವಾಣೀನಗರ ಹೈಯರ್ ಸೆಕೆಂಡರಿ ಶಾಲೆ ಶಿಕ್ಷಕ ಗೋಪಾಲ ಕಾಟುಕುಕ್ಕೆ ಸ್ವಸ್ಥಿ ವಾಚನದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಧಾರ್ಮಿಕತೆಯನ್ನು ಪ್ರಪಂಚಕ್ಕೆ ಸಾರಿದ್ದಾರೆ ಎಂದು ಹೇಳಿ ತಮ್ಮ ಸ್ವರ್ಗ ಶಾಲೆಯ ಸವಿ ನೆನಪು, ಅನುಭವಗಳನ್ನು ತಿಳಿಸಿದರು.
ಎಣ್ಮಕಜೆ ಗ್ರಾ.ಪಂ. ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ.ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಗೀತಾ ಕುಮಾರಿ ವಾರ್ಷಿಕ ವರದಿ ಓದಿದರು. ಸ್ಪರ್ಧಾ ವಿಜೇತ ಮಕ್ಕಳಿಗೆ, ಹೆತ್ತವರಿಗೆ ಬಹುಮಾನ, ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಶಾಲಾ ವ್ಯವಸ್ಥಾಪಕ ಹೃಷಿಕೇಶ್ ವಿ.ಎಸ್, ಪಿ.ಟಿ.ಎ.ಅಧ್ಯಕ್ಷ ಶ್ರೀಧರ ಪೂಕರೆ, ಎಂ.ಪಿ.ಟಿ.ಎ.ಅಧ್ಯಕ್ಷೆ ಪ್ರಿಯಾ ಚಾಕಟೆಕುಮೇರಿ ಉಪಸ್ಥಿತರಿದ್ದರು. ಸಂಜನಾ ಹೃಷಿಕೇಶ್ ಸ್ವಾಗತಿಸಿದರು.ಶಿಕ್ಷಕ ಪದ್ಮನಾಭ ಶೆಟ್ಟಿ ವಂದಿಸಿದರು.ಸಮರ್ಥ ಹೃಷಿಕೇಶ್ ಮತ್ತು ಸಮೀಕ್ಷಾ ನಿರ್ವಹಿಸಿದರು.


