ಉಪ್ಪಳ: ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ ಮಂಜೇಶ್ವರ ಉಪಜಿಲ್ಲಾ ಸಮಿತಿ ಎಕಾಡೆಮಿಕ್ ಕೌನ್ಸಿಲ್ ನೇತೃತ್ವದಲ್ಲಿ ಪ್ರಸ್ತುತ ವರ್ಷದ ಎಲ್ ಎಸ್ ಎಸ್-ಯು ಎಸ್ ಎಸ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಂಜೇಶ್ವರ ಉಪಜಿಲ್ಲಾ ಮಟ್ಟದ ತರಬೇತಿ ತರಗತಿ ಉಪ್ಪಳ ಬಿ.ಆರ್.ಸಿ ಹಾಗೂ ಮುಳಿಂಜ ಶಾಲೆಯಲ್ಲಿ ಗುರುವಾರ ಆರಂಭಗೊಂಡಿತು.
ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ದಿನೇಶ್ ವಿ. ತರಬೇತಿಯನ್ನು ಉದ್ಘಾಟಿಸಿದರು. ಕೆಎಸ್‍ಟಿಎ ಜಿಲ್ಲಾ ನೇತಾರ ಮೋಹನ ಬಿ.ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಮುಖಂಡರಾದ ಪ್ರೇಮರಾಜನ್, ಸಂತೋಷ್ ಕುಮಾರ್, ಗಫೂರ್ ಉಪಸ್ಥಿತರಿದ್ದು ಶುಭಹಾರೈಸಿದರು. ಉಪಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್ ಪಾವಳ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರತೀಶ್ ಬಾಬು ವಂದಿಸಿದರು. ಕೆಎಸ್‍ಟಿಎ ಅಕಾಡೆಮಿಕ್ ಕೌನ್ಸಿಲ್‍ನ ನೇತೃತ್ವದಲ್ಲಿ ಪ್ರತಿವಾರ ತರಬೇತಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಆರಂಭದ ದಿನದ ತರಬೇತಿಯಲ್ಲಿ ಉಪಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳ 150ಕ್ಕಿಂತಲೂ ಮಿಕ್ಕಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತರಬೇತುದಾರರಾಗಿ ರತೀಶ್ ಬಾಬು ಉಪ್ಪಳ ಹಾಗೂ ಅಮಿತ ಪಿ.ಬಾಕ್ರಬೈಲು ಸಹಕರಿಸಿದರು.





