HEALTH TIPS

ಗಡಿನಾಡಿನ ಬೇಡಿಕೆ ಸಾಕಾರದತ್ತ- ಕಾಸರಗೋಡು ವೈದ್ಯಕೀಯ ಕಾಲೇಜಿ ನಿರ್ಮಾಣ ಪೂರ್ಣತೆ ಯೋಜನೆ ಕಿಫ್ ಬಿಗೆ : ಸಚಿವ ಥಾಮಸ್


           ಕಾಸರಗೋಡು: ನಾಡಿನ ಅನೇಕ ವರ್ಷಗಳ ಕನಸು ಕಿಫ್ ಬಿ ಮೂಲಕ ನನಸಾಗಲಿದೆ. ಕಾಸರಗೋಡು ವೈದ್ಯಕೀಯ ಕಾಲೇಜಿನ ನಿರ್ಮಾಣ ಪೂರ್ಣತೆಯ ಯೋಜನೆ ಕಿಫ್ ಬಿ ಯಲ್ಲಿ ಅಳವಡಿಸಿ ಜಾರಿಗೊಳಿಸಲಾಗುವುದು.
        ರಾಜ್ಯ ಹಣಕಾಸು ಸಚಿವ ಡಾ.ಟಿ.ಎಂ.ಥಾಮಸ್ ಐಸಕ್ ಅವರು ಈ ಘೋಷಣೆ ನಡೆಸಿದರು. ನುಳ್ಳಿಪ್ಪಾಡಿಯಲ್ಲಿ ನಡೆದ ಕಿಫ್ ಬಿ ಮೂರು ದಿನಗಳ ಪ್ರದರ್ಶನಕ್ಕೆ ಗುರುವಾರ ಬೇಟಿ ನೀಡಿದ ಅವರು ಕಿಫ್ ಬಿ ಯೋಜನೆಗಳ ಕ್ಷೇತ್ರ ಮಟ್ಟದ ಅವಲೋಕನ ಸಭೆಯಲ್ಲಿ ಮಾತನಾಡುವ ವೇಳೆ ಈ ಭರವಸೆ ನೀಡಿದರು.                                   
         ಶಾಸಕರಾದ ಎಂ.ಸಿ.ಕಮರುದ್ದೀನ್, ಎನ್.ಎ.ನೆಲ್ಲಿಕುನ್ನು, ಕೆ.ಕುಂuಟಿಜeಜಿiಟಿeಜರಾಮನ್, ಎಂ.ರಾಜಗೋಪಾಲ್, ಕಂಆಯ ಸಚಿವರ ವಿಧಾನಸಭೆ ಕ್ಷೇತ್ರದ ಪ್ರತಿನಿಧಿ, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು,ಕಿಫ್ ಬಿ ಪದಾಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಪತ್ರಕರ್ತರು, ಸಾರ್ವಜನಿಕರು ಭಾಗವಹಿಸಿದ್ದ ಸಭೆಯಲ್ಲಿ ಸಚಿವ ಈ ಘೋಷಣೆ ನಡೆಸಿದರು.
         ವಿಧಾನಸಭೆ ಕ್ಷೇತ್ರಗಳಲ್ಲಿ ಕಿಫ್ ಬಿ ಮೂಲಕ ಪೂರ್ಣಗೊಳಿಸುವ ವಿದ್ಯಾಲಯಗಳ ಯೋಜನೆಗಳಿಗೆ ಚಾಲನೆ ನೀಡುವ ವೇಳೆ ಕಟ್ಟಡಗಳ ಉದ್ಘಾಟನೆ ಮಾತ್ರ ನಡೆಸಿ ಸಮಾರಂಭ ಮುಗಿಸಕೂಡದು ಎಂದು ಹಣಕಾಸು ಸಚಿವ ಡಾ.ಟಿ.ಎಂ.ಥಾಮಸ್ ಐಸಕ್ ಅವರು ಆಯಾ ಸಂಸ್ಥೆಗಳ ಮುಖ್ಯಸ್ಥರಿಗೆ ಕಿವಿಮಾತು ಹೇಳಿದ್ದಾರೆ. ಸ್ಥಳೀಯ ಕ್ಲಬ್ ಗಳು, ಹಳೆ ವಿದ್ಯಾರ್ಥಿ ಸಂಘಟನೆಗಳು ಇತ್ಯಾದಿಗಳ ಸಹಭಾಗಿತ್ವ ಪಡೆದು ಶಾಲೆಗೆ ಉತ್ತಮವಾದುದೊಂದು ಪ್ರಯೋಗಾಲಯ, ಸಾರ್ವಜನಿಕರ ಸಹಾಯ ಪಡೆದು ಉತ್ತವಾದೊಂದು ಗ್ರಂಥಾಲಯ ನಿರ್ಮಿಸುವ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಅವರು ಸೂಚಿಸಿದರು.
         ಕಿಫ್ ತಾನು ವಹಿಸುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತಿರುವ, ಕಿಫ್ ಬಿಯ ಚಟುವಟಿಕೆಗಳು ಆಯಾ ಜಿಲ್ಲೆಗಳಲ್ಲಿ ನಡೆಸುತ್ತಿರುವ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಇಂಥಾ ಪ್ರದರ್ಶನಗಳು ಪೂರಕ ಎಂದು ಹಣಕಾಸು ಸಚಿವ ಅಭಿಪ್ರಾಯಪಟ್ಟರು.
      ಅವಲೋಕನ ಸಭೆಗೆ ಹಣಕಾಸು ಸಚಿವ, ಕಿಫ್ ಬಿ ಸಿ.ಇ.ಒ. ಡಾ.ಕೆ.ಎಂ.ಅಬ್ರಾಹಂ ಅವರು ನೇತೃತ್ವ ವಹಿಸಿದ್ದರು. ಕಿಫ್ ಯೋಜನೆ ಅಪ್ರೈಸರ್ ಡಿವಿಝನ್ ಪ್ರಧಾನ ಪ್ರಬಂಧಕ ಪಿ.ಎ.ಷೈಲಾ, ಯೋಜನೆಗಳ ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಸಿಬ್ಬಂದಿ, ಜನಪ್ರತಿನಿಧಿಗಳು ಸಂವಾದ ನಡೆಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಎಲ್ಲ ಇಲಖೆಗಳು ವದಿ ಸಲ್ಲಿಸುವಂತೆ ಆದೇಶ ನೀಡಿದರು. ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಪೂರ್ತೀಕರಣ ಮಾರ್ಚ್-ಮೇ ತಿಂಗಳಲ್ಲಿ ನಡೆಯಲಿದೆ ಎಂದು ಇಲಾಖೆಗಳ ಸಿಬ್ಬಂದಿ ಸಭೆಯಲ್ಲಿ ತಿಳಿಸಿದರು. ಅರಣ್ಯ, ಜಲಪ್ರಾಧಿಕಾರ, ವಿದ್ಯುನ್ಮಂಡಳಿ ಸಹಿತ ಇಲಾಖೆಗಳ  ಚಟುವಟಿಕೆಗಳ ಪೂರ್ಣತೆಗೆ ಕೆಲವು ತಡೆಗಳು ಇದ್ದು, ಇಲಾಖೆ ಸಿಬ್ಬಂದಿಯ ಜಂಟಿ ಸಭೆ ನಡೆಸಿ ಏಕೀಕರಣದೊಂದಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಹಾರ ನಡೆಸುವಂತೆ ಸಚಿವ ಸಭೆಯಲ್ಲಿ ತಿಳಿಸಿದರು.                                   
            ಅಭಿವೃದ್ದಿ ದಿಶೆಯ ಭರವಸೆ ಹೆಚ್ಚಿಸಿದ ಸಚಿವರ ಘೋಷಣೆ: 
    ಕಾಸರಗೋಡು ವೈದ್ಯಕೀಯ ಕಾಲೇಜಿನ ಪೂರ್ಣತೆ ಯೋಜನೆ ಕಿಫ್ ಬಿ ಮೂಲಕ ಜಾರಿ ಎಂಬ ಹಣಕಾಸು ಸಚಿವ ಡಾ.ಟಿ.ಎಂ.ಥಾಮಸ್ ಐಸಕ್ ಅವರ ಘೋಷಣೆ ನಾಡಿನ ಉತ್ಸಾಹವನ್ನು ಹೆಚ್ಚಿಸಿದೆ. ನುಳ್ಳಿಪ್ಪಾಡಿಯಲ್ಲಿ ನಡೆದ ಕಿಫ್ ಬಿ ಪ್ರದರ್ಶನದ ಅಂಗವಾಗಿ ಗುರುವಾರ ನಡೆದ ಯೋಜನೆಗಳ ಕ್ಷೇತ್ರ ಮಟ್ಟದ ಅವಲೋಕನ ಸಭೆ  ಇದಕ್ಕೆ ಸಾಕ್ಷಿಯಾಯಿತು. ಇದು ಕಾಸರಗೋಡಿಗೆ ಲಭಿಸಿದ ಪ್ರೀತಿಯ ಉಡುಗೊರೆ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. ಇತರ ಶಾಸಕರು ತಮ್ಮ ಸಂತೋಷ ವ್ಯಕ್ತಪಡಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries