ಬದಿಯಡ್ಕ: ಜಪಾನ್‍ನಲ್ಲಿ ನಡೆದ 39ನೇ ಅಂತರಾಷ್ಟೀಯ ರಾಡಾರ್ ಟೆಕ್ನಾಲಜಿ ಮಹಾ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಪ್ರಬಂಧ ಮಂಡಿಸಿದ ಯುವ ವಿಜ್ಞಾನಿ ನೀರ್ಚಾಲು ಸಮೀಪದ ಬೇಳ ದರ್ಬೆತ್ತಡ್ಕ ಅಶ್ವಿನ್ ರಾಜು ಡಿ.ಕೆ. 2019-20ನೇ ವರ್ಷದ ಶ್ರೇಷ್ಠ ಉದ್ಯೋಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜ.15ರಂದು ದೆಹಲಿಯಲ್ಲಿ ನಡೆಯಲಿರುವ ಐ.ಎಮ್.ಡಿ.ಯ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ ಕಾಸರಗೋಡು ಜಿಲ್ಲಾ ಸಮಿತಿಯ ಹಿರಿಯ ಸಲಹೆಗಾರ, ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ದರ್ಬೆತ್ತಡ್ಕ ಅವರ ಪುತ್ರರಾಗಿದ್ದಾರೆ. ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ ಕಾಸರಗೋಡು ಜಿಲ್ಲಾ ಸಮಿತಿ, ಕಾಸರಗೋಡು ಜಿಲ್ಲಾ ಮೊಗೇರ ಸಂಘ, ಅಂಬೇಡ್ಕರ್ ವಿಚಾರವೇದಿಕೆ ಸಂಘಟನೆಗಳು ಅವರ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸಿದೆ.





