ಕಾಸರಗೋಡು: ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಮಾದ್ಯಮಕ್ಕೆ ಮತ್ತೆ ಮಲಯಾಳ ಶಿಕ್ಷಕನನ್ನು ನೇಮಿಸಲಾಗಿದ್ದು, ಇದನ್ನು ವಿರೋಧಿಸಿ ಕನ್ನಡ ಮಾಧ್ಯಮ ವಿದ್ಯಾರ್ಥಿಗು ಮತ್ತು ಹೆತ್ತವರು ಶಾಲೆ ಎದುರು ಪ್ರತಿಭಟನೆ ನಡೆಸಿದರು
ಹೊಸದುರ್ಗ ಕನ್ನಡ ಸಂಘದ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿತ್ತು. ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕನ ನೇಮಕಾತಿ ಪ್ರತಿಭಟಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದರು. ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕನ ನೇಮಕಾತಿ ಪ್ರತಿಭಟಿಸಿ ವಿದ್ಯಾರ್ಥಿಗಳು ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಹಿಂದೆಯೂ ಮಲಯಾಳ ಶಿಕ್ಷಕನ ನೇಮಕಾತಿ ನಡೆಸಲಾಗಿದ್ದು, ವಿದ್ಯಾರ್ಥಿಗಳ ಪ್ರತಿಭಟನೆ ಪರಿಗಣಿಸಿ ಶಿಕ್ಷಕನನ್ನು ರಜೆಯಲ್ಲಿ ಕಳುಹಿಸಲಾಗಿತ್ತು. ರಜೆ ಕಳೆದು ಇದೇ ಶಿಕ್ಷಕ ಮತ್ತೆ ಶಾಲೆಗೆ ಆಗಮಿಸುತ್ತಿದ್ದಂತೆ ಮತ್ತೆ ವಿದ್ಯಾಥಿಗಳು ಪ್ರತಿಭಟನೆ ಸೂಚಿಸಿದ್ದರು. ಈ ಬಗ್ಗೆ ಶಿಕ್ಷಣ ಉಪನಿರ್ದೇಶಕರಿಗೆ ನೀಡಿದ ದೂರಿನನ್ವಯ, ಶಿಕ್ಷಕನ ಭಾಷಾ ಪರಿಜ್ಞಾನದ ಬಗ್ಗೆ ಪರಿಶೀಲನೆ ನಡೆಸಿದ ಬಳಿಕವಷ್ಟೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ನ್ಯಾಯ ಲಭುಸುವಲ್ಲಿ ವರೆಗೆ ತರಗತಿ ಬಹಿಷ್ಕರಿಸಲು ವಿದ್ಯಾರ್ಥಿಗಳು ತೀರ್ಮಾನಿಸಿದ್ದಾರೆ.
ಹೊಸದುರ್ಗ ಕನ್ನಡ ಸಂಘದ ಅಧ್ಯಕ್ಷ ಎಚ್. ಎಸ್. ಭಟ್, ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು, ಲಕ್ಷ್ಮಣ, ಕೌನ್ಸಿಲರ್ ಸುಕನ್ಯಾ, ಬಾಲಕೃಷ್ಣ ಮಾಸ್ಟರ್, ಪ್ರಭಾಶಂಕರ್, ಪುರುಷೊತ್ತಮ, ಮಲ್ಲಿಕಾರ್ಜುನ, ವನಿತಾ, ಶಾಂಭವಿ, ಸವಿತಾ, ರಾಜ, ವಿರೂಪಾಕ್ಷ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಹೆತ್ತವರು ಪಾಲ್ಗೊಂಡಿದ್ದರು.
(ಚಿತ್ರ ಮಾಹಿತಿ:ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿಗಳು ಮತ್ತು ಹೆತ್ತವರು ತರಗತಿ ಬಹಿಷ್ಕರಿಸಿ ಡಿಡಿಇಗೆ ಮನವಿ ಸಲ್ಲಿಸಿದರು.)