ಕಾಸರಗೋಡು: ಜಿಲ್ಲೆಯ ವಿವಿಧ ಮಂಡಲಗಳ ಬಿಜೆಪಿ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. 2020ರಿಂದ 2013ನೇ ಸಾಲಿನ ವರೆಗೆ ಇವರ ಸೇವಾವಧಿಯಿರಲಿದೆ. ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷರಾಗಿ ಮಣಿಕಂಠ ರೈ ಅವರನ್ನು ಚುನಾವಣಾಧಿಕಾರಿ ವಿ.ಕುಞÂಕಣ್ಣನ್ ಬಳಾಲ್, ಉದುಮ ಮಂಡಲ ಸಮಿತಿ ಅಧ್ಯಕ್ಷರಾಗಿ ಕೆ.ಟಿ ಪುರುಷೋತ್ತಮನ್ ಅವರನ್ನು ಚುನಾವಣಾಧಿಕಾರಿ ರವೀಶ ತಂತರ್ರಿ ಕುಂಟಾರು, ಕಾಞಂಗಾಡು ಮಂಡಲ ಸಮಿತಿ ಅಧ್ಯಕ್ಷರಾಗಿ ಎನ್. ಮಧು ಅವರನ್ನು ಚುನಾವಣಾಧಿಕಾರಿ ಪಿ.ಸುರೇಶ್ ಕುಮಾರ್ ಶೆಟ್ಟಿ ಹಾಗೂ ತೃಕ್ಕರಿಪುರ ಮಂಡಲ ಸಮಿತಿ ಅಧ್ಯಕ್ಷರಾಗಿ ಸಿ.ವಿ ಸುರೇಶ್ ಅವರನ್ನು ಚುನಾವಣಾಧಿಕಾರಿ ಇ. ಕೃಷ್ಣನ್ ಆಯ್ಕೆ ಮಾಡಿದ್ದಾರೆ.
(ಚಿತ್ರ ಮಾಹಿತಿ: 1) ಮಣಿಕಂಠ ರೈ,2)ಕೆ.ಟಿ ಪುರುಷೋತ್ತಮನ್,3)ಎನ್. ಮಧು,4)ಸಿ.ವಿ ಸುರೇಶ್)





