HEALTH TIPS

ನಿಮ್ಮ ತಪ್ಪುಗಳಿಗೆ ನಮ್ಮನ್ನು ಹೊಣೆಯಾಗಿಸಬೇಡಿ': ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ತರಾಟೆ ತೆಗೆದುಕೊಂಡ ಭಾರತ

     
     ನ್ಯೂಯಾರ್ಕ್:ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಭಾರತದ ಮೇಲೆ ಸುಳ್ಳು ಆಪಾದನೆ ಹೊರಿಸುವುದನ್ನು ಪಾಕಿಸ್ತಾನ ನಿಲ್ಲಿಸಬೇಕು ಎಂದು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತರಾಟೆಗೆ ತೆಗೆದುಕೊಂಡಿದೆ. ಮಾಟ, ಮಂತ್ರದಂತಹ ಬ್ಲಾಕ್ ಮ್ಯಾಜಿಕ್ ನಂತಹ ಕೆಲಸಗಳಿಗೆ ಪಾಕಿಸ್ತಾನ ಉತ್ತಮ ಉದಾಹರಣೆ ಎಂದು ಕೂಡ ಹೇಳಿದೆ.
   ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಮಾತನಾಡಿ ಪಾಕಿಸ್ತಾನಕ್ಕೆ ತೀಕ್ಷ್ಣ ಸಂದೇಶ ರವಾನಿಸಿದ್ದು ನಿಮ್ಮ ತಪ್ಪುಗಳನ್ನು ಸರಿಪಡಿಸಲು ಇಲ್ಲಿ ಯಾರೂ ಇಲ್ಲ, ನಿಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಭಾರತದ ಮೇಲೆ ಸುಖಾಸುಮ್ಮನೆ ಆಪಾದನೆ ಹೊರಿಸಬೇಡಿ ಎಂದರಲ್ಲದೆ ಭಯೋತ್ಪಾದನೆಯಿಂದ ಪಾಕಿಸ್ತಾನವನ್ನು ತಡೆಯುವಲ್ಲಿ ವಿಶ್ವಸಂಸ್ಥೆಯ ಉನ್ನತ ಅಂಗ ಕೂಡ ಅಸಮರ್ಥವಾಗಿದೆ ಎಂದರು.ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗುರುತು, ನ್ಯಾಯಸಮ್ಮತೆ, ಪ್ರಸ್ತುತತೆ ಮತ್ತು ಕಾರ್ಯಕ್ಷಮತೆಯ ಸಮಸ್ಯೆಯನ್ನು ಇತ್ತೀಚಿನ ದಿನಗಳಲ್ಲಿ ಎದುರಿಸುತ್ತಿದೆ. ಜಾಗತಿಕ ಭಯೋತ್ಪಾದನೆಯ ಜಾಲವ್ಯಾಪ್ತಿ, ಹೊಸ ತಂತ್ರಜ್ಞಾನಗಳ ಸಶಸ್ತ್ರೀಕರಣ, ದೇಶೀಯ ಶಸ್ತ್ರಾಸ್ತ್ರಗಳಿಂದ ಭಯೋತ್ಪಾದನೆಯನ್ನು ನಿಗ್ರಹಿಸುವ ಅಸಮರ್ಥತೆಯನ್ನು ಭದ್ರತಾ ಮಂಡಳಿ ತೋರಿಸುತ್ತಿದೆ ಎಂದು ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ಪಾಕಿಸ್ತಾನದ ವಿಶ್ವಸಂಸ್ಥೆಯ ಶಾಶ್ವತ ರಾಯಭಾರಿ ಮುನಿರ್ ಅಕ್ರಮ್, ಜಮ್ಮು-ಕಾಶ್ಮೀರ ವಿಚಾರವನ್ನು ಪ್ರಸ್ತಾವಿಸಿ, ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಹೇಳಿಕೆ ನೀಡಿದ್ದಕ್ಕೆ ಸೈಯದ್ ಅಕ್ಬರುದ್ದೀನ್ ತಿರುಗೇಟು ನೀಡಿದ್ದಾರೆ.
    ಜಾಗತಿಕ ವಾಸ್ತವತೆಗಳಿಗೆ ಪ್ರತಿನಿಧಿಯಾಗಿ ಭದ್ರತಾ ಮಂಡಳಿಯ ಅವಶ್ಯಕತೆಯನ್ನು ಸಹ ಸೈಯದ್ ಅಕ್ಬರುದ್ದೀನ್ ಒತ್ತಿ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries