HEALTH TIPS

2019ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಭಾರತದ ಜಿಡಿಪಿ ಶೇ. 4.7!


     ನವದೆಹಲಿ: 2019ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶೀಯ ಉತ್ಪನ್ನ(ಜಿಡಿಪಿ) 4.7ರಷ್ಟಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.
           ಕಳೆದ ವರ್ಷ ಜುಲೈ ಹಾಗೂ ಸೆಪ್ಟೆಂಬರ್ ಮಧ್ಯದ 2ನೇ ತ್ರೈಮಾಸಿಕ ಜಿಡಿಪಿ ದರ 4.5ಕ್ಕೆ ಕುಸಿತ ಕಂಡಿತ್ತು. ಇದು ಕಳೆದ ಆರು ವರ್ಷಗಳಲ್ಲಿ ದಾಖಲಾದ ಅತೀ ಕಡಿಮೆ  ಬೆಳವಣಿಗೆಯ ದರವಾಗಿತ್ತು.  ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ 4.7ರಷ್ಟೀದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಇನ್ನು 2019ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಜಿಡಿಪಿ ಶೇ. 4.5ರಿಂದ ಶೇ. 5.1ಕ್ಕೆ ಪರಿಷ್ಕರಿಸಲಾಗಿದೆ.ಮಾರ್ಚ್ ಅಂತ್ಯದ ಹಣಕಾಸು ವರ್ಷದಲ್ಲಿ ಒಟ್ಟಾರೆ ಜಿಡಿಪಿ ಬೆಳವಣಿಗೆಯನ್ನು ಕೇಂದ್ರ ಸರ್ಕಾರವು ಶೇಕಡಾ 5ರಷ್ಟನ್ನು ನಿಗದಿಪಡಿಸಿರುವ ಸಮಯದಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ಕುರಿತು ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿಯ ಅಂದಾಜುಗಳು ಬಂದಿವೆ.
      ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಸರ್ಕಾರದ ಗುರಿಯನ್ನು ಸಾಧಿಸಲು ಬಜೆಟ್ ಚಾಲನಾ ಬಳಕೆ ಮತ್ತು ಮೂಲಸೌಕರ್ಯಗಳನ್ನು ಬಲಪಡಿಸಲು ಅಡಿಪಾಯ ಹಾಕಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ಹೇಳಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries