HEALTH TIPS

ಫೆ.25-28 : ರತ್ನಗಿರಿಯ ಕಾಲಾವಧಿ ಕಳಿಯಾಟ ಮಹೋತ್ಸವ


         ಬದಿಯಡ್ಕ: ಮುಖಾರಿ ಮುವಾರಿ ಸಮುದಾಯದ ಕ್ಷೇತ್ರವಾದ ನೀರ್ಚಾಲು ರತ್ನಗಿರಿ ಶ್ರೀ ಕುದುರೆಕ್ಕಾಳಿ ಭಗವತಿ ಕ್ಷೇತ್ರದ ಕಲಾವಧಿ ಕಳಿಯಾಟ ಮಹೋತ್ಸವವು ಫೆ.25 ರಿಂದ 28 ರ ವರೆಗೆ ವಿವಿಧ ದೈವ ಕೋಲಾದಿಗಳು ಹಾಗು ವೈದಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ನೇತೃತ್ವದಲ್ಲಿ ನಡೆಯಲಿರುವುದು.
         ಫೆ.25 ರಂದು ಪೂರ್ವಾಹ್ನ ಗಣಪತಿ ಹೋಮ, ಶುದ್ಧಿ ಕಲಶ, ಪ್ರತಿಷ್ಠಾ ದಿನಾಚರಣೆ, ಬೆಳಗ್ಗೆ 10 ಕ್ಕೆ ನೀರ್ಚಾಲು ಅಶ್ವತ್ಥಕಟ್ಟೆಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೊರಡಲಿರುವುದು. 11.30 ರಿಂದ ತುಲಾಭಾರ ಸೇವೆ, ಅನ್ನದಾನ, ಫೆ.26 ರಂದು ಬೆಳಗ್ಗೆ 10 ಕ್ಕೆ ಭಜನೆ, 11.30 ರಿಂದ ಕುದುರೆಕ್ಕಾಳಿ ಭಗವತಿ(ಅಶ್ವರೂಢ ಪಾರ್ವತಿ) ಗೆ ತಂಬಿಲ, ಪೂಜೆ, ಪ್ರಸಾದ ವಿತರಣೆ, ಅನ್ನದಾನ, ಸಂಜೆ 4 ಕ್ಕೆ ಬಬ್ಬರಿಯ ಕಟ್ಟೆಯಲ್ಲಿ ತಂಬಿಲ, ರಾತ್ರಿ 7.30 ರಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ, 9 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯುವುದು, 10 ರಿಂದ ಶ್ರೀ ದೈವದ ಕುಳಿಚ್ಚಾಟ ನಡೆಯಲಿದೆ.
         ಫೆ.27 ರಂದು ಪೂರ್ವಾಹ್ನ 10 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲೋತ್ಸವ, ಪ್ರಸಾದ ವಿತರಣೆ, ಅನ್ನದಾನ, ರಾತ್ರಿ 9.30 ಕ್ಕೆ ಸುಂಕದಕಟ್ಟೆ ಮೇಳದವರಿಂದ ಸರ್ಪ ಸಂಬಂಧ ಎಂಬ ತುಳು ಕಥಾಭಾಗದ ಯಕ್ಷಗಾನ ಬಯಲಾಟ ಜರಗಲಿರುವುದು.
       ಫೆ.28 ರಂದು ಪೂರ್ವಾಹ್ನ 10 ರಿಂದ ರಕ್ತ ಚಾಮುಂಡಿ ದೈವದ ಕೋಲೋತ್ಸವ, ಪ್ರಸಾದ ವಿತರಣೆ, ಅನ್ನದಾನ, ಸಂಜೆ 3 ರಿಂದ ಶ್ರೀ ಗುಳಿಗ ದೈವದ ಕೋಲದೊಂದಿಗೆ ಕಳಿಯಾಟ ಮಹೋತ್ಸವ ಸಂಪನ್ನಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries