ಮಂಜೇಶ್ವರ: ಮೀಂಜ ಗ್ರಾ.ಪಂ. ಕುಟುಂಬಶ್ರೀ ಸಿ.ಡಿ.ಎಸ್ ವತಿಯಿಂದ ವಿವಿಧ ಕೃಷಿ ಗುಂಪು(ಜೆಎಲ್‍ಜಿ)ಗಳು ಸೇರಿ ಕುಳೂರು ವಾರ್ಡಿನ ಎಲಿಯಾಣದ 26 ಎಕರೆ ಪ್ರದೇಶದಲ್ಲಿ ಬೆಳೆಸಿದ ಭತ್ತ ಕೃಷಿಯ ಮೊದಲ ಹಂತದ ಭತ್ತ ನೆಡುವ ನಾಟಿ ಉತ್ಸವವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಶಂಶಾದ್ ಶುಕೂರ್ ಅವರು ಬುಧವಾರ ಉದ್ಘಾಟಿಸಿದರು.
ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಸಂಯೋಜಕ ಸುರೇಂದ್ರನ್.ಟಿ.ಟಿ ಅವರು ಉಪಸ್ಥಿತರಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಫಾತಿಮ ಮೊಯ್ದಿನ್, ಸದಸ್ಯರಾದ ಚಂದ್ರಾವತಿ ವಿ.ಪಿ, ಸುಂದರಿ ಶೆಟ್ಟಿ, ಶೋಭಾ ಸೋಮಪ್ಪ, ಗ್ರಾ.ಪಂ.ಸಹಾಯಕ ಕಾರ್ಯದರ್ಶಿ ಜೋಯ್ ಥೋಮಸ್, ಬಿ.ಸಿ ಭವ್ಯ, ಸಿ.ಡಿ.ಎಸ್ ಲೆಕ್ಕಪರಿಶೋಧಕ ಉದಯಕುಮಾರ್ ಸಿ., ಸಿ.ಡಿ.ಎಸ್ ಸದಸ್ಯೆ ಸುಚಿತ್ರ ಎಸ್ ಆಳ್ವ, ಎ.ಡಿ.ಎಸ್ ಪ್ರತಿನಿಧಿಗಳಾಧ ಸರಸ್ವತಿ, ಕುಶಲ ಕುಮಾರ್, ಊರಿನ ಹಿರಿಯ ಕೃಷಿಕ ಬಾಳಪ್ಪ ಬಂಗೇರ ಉಪಸ್ಥಿತರಿದ್ದರು.
ಈ ಸಂದರ್ಭ ಕಳೆದ ಬೆಳೆಯಲ್ಲಿ ಲಭ್ಯವಾದ ಜೈವ ಅಕ್ಕಿಯನ್ನು ಅರಿಶ್ರೀ ಎಂಬ ಬ್ರಾಂಡ್‍ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಕುಟುಂಬಶ್ರೀ ಜಿಲ್ಲಾ ಸಂಯೋಜಕ ಸುರೇಂದ್ರನ್ ಟಿ.ಟಿ ಅವರು ಗ್ರಾ.ಪಂ. ಅಧ್ಯಕ್ಷೆ ಶಂಶಾದ್ ಶುಕೂರ್ ಅವರಿಗೆ ಮೊದಲ ಮಾರಾಟವನ್ನು ಮಾಡಿ ಚಾಲನೆ ನೀಡಿದರು. ಸಿ.ಡಿ.ಎಸ್ ಅಧ್ಯಕ್ಷೆ ಲತಾದೇವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗಾಯತ್ರಿ .ಪಿ ಸ್ವಾಗತಿಸಿ, ವಂದಿಸಿದರು.



