HEALTH TIPS

ಅಭಿವೃದ್ಧಿಯ ಕನಸನ್ನು ಬಿತ್ತಿದ ಕಿಫ್ ಬಿ ಮೂರು ದಿನಗಳ ಪ್ರದರ್ಶನ: ನಿರೀಕ್ಷೆಗೆ ಕೈಗನ್ನಡಿಯಾದ ಯುವಜನ ಸಂವಾದ

 
    ಕಾಸರಗೋಡು:  ಗಡಿನಾಡು ಕಾಸರಗೋಡು ಜಿಲ್ಲೆಗೆ ನೂತನ ಅಭಿವೃದ್ಧಿ ಕನಸನ್ನು ಬಿತ್ತಿ ಕಿಫ್ ಬಿ ನಿರೀಕ್ಷೆಗೆ ಕಾರಣವಾಗಿದೆ. ನಗರದ ನುಳ್ಳಿಪ್ಪಾಡಿಯಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಸರಕಾರದ ಕಿಫ್ ಬಿ ಅಭವೃಧ್ಧಿ ಯೋಜನೆಗಳ ಪ್ರದರ್ಶನ ನಾಡಿನ ಜನತೆಗೆ ಪ್ರಗತಿಯ ಹೊಸ ಉತ್ಸಾಹವನ್ನು ಮೂಡಿಸಿದೆ. 
      ಇದಕ್ಕೆ ಕೈಗನ್ನಡಿಯಾಗಿ ಕೊನೆಯ ದಿನ ಕಿಫ್ ಬಿ ವೇದಿಕೆಯಲ್ಲಿ ನಡೆದ ಯುವಜನ ಸಂವಾದ ಅಭಿವೃದ್ಧಿಯ ನಿರೀಕ್ಷೆಗಳಿಗೆ ಗರಿಮೂಡಿಸಿದೆ. ರಾಜ್ಯ ಹಣಕಾಸು ಸಚಿವ ಡಾ.ಟಿ.ಎಂ.ಥಾಮಸ್ ಅವರ ಸಮಕ್ಷದಲ್ಲಿ ಈ ಸಂವಾದ ಜರುಗಿತು.
    ಈ ಸಂದರ್ಭ ಮಾತನಾಡಿದ ಹಣಕಾಸು ಸಚಿವ ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸುವ ವೇಳೆ ಕಾಲಕ್ಕೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಜಾರಿ ನಡೆಯಬೇಕು. ಇದು ಪರಿನಾಮಕಾರಿ ಫಲಿತಾಂಶ ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಉದ್ದೇಶದೊಂದಿಗೆ ಜಾರಿಗೊಳಿಸಲಾಗುವ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ತನ್ನ ಯೋಜನೆಗಳನ್ನು ರಚಿಸುವ ವೇಳೆ ಶೇ 10 ನೂತನ ಯೋಜನೆಗಲಿರುವಂತೆ ಯತ್ನಿಸಬೇಕು. ಅಭಿವೃದ್ಧಿಗೆ ನವೀನ ರೀತಿಗಳನ್ನು ಅನುಸರಿಸಬೇಕು ಎಂದು ಆಗ್ರಹಿಸಿದರು.
     ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಸಿದ್ಧಪಡಿಸಿರುವ ಅಭಿವೃದ್ಧಿ ಯೋಜನೆಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಲಾಯಿತು. ಗೇರುಬೀಜ, ಅಡಕೆ, ಚಿಪ್ಪುಮೀನು ಸಹಿತ ಕೃಷಿಯ ಅಭಿವೃದ್ಧಿಗೆ ಚೀಮೇನಿ ಇಂಡಸ್ಟರಿಯಲ್ ಪಾರ್ಕ್ ನಿರ್ಮಿಸುವ ಬಗ್ಗೆ ವಿಚಾರ ಮಂಡಿಸಲಾಯಿತು.ಇದಕ್ಕೆ ಜಾಗ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಚಿವ ಭರವಸೆ ನೀಡಿದರು. ಹೊಸಂಗಡಿಯ ಮಲ್ಟಿ ಪರ್ಪಸ್ ಕ್ರೂ ಫೆಸಿಲಿಟೀಸ್ ಎಂಬುದು ಕೇರಳಕ್ಕೆ ಆಗಮಿಸುವ ವಾಹನಗಳ ಮತ್ತು ಚಾಲಕರ ತಪಾಸಣೆ ಕೇಂದ್ರವಾಗಿದೆ. ಇದು ರಾಜ್ಯದಲ್ಲಿ ಸಂಭವಿಸುವ ವಾಹನಾಫಘಾತವನ್ನು ನಿಂಯಂತ್ರಿಸುವಲ್ಲಿ ಗರಿಷ್ಠ ಮಟ್ಟದಲ್ಲಿ ಪೂರಕವಾಗಲಿದೆ ಎಂದು ನಿರೀಕ್ಷಿಲಾಗಿದೆ. ಅಣಂಗೂರಿನಲ್ಲಿ ಫುಡ್ ಸ್ಟ್ರೀಟ್, ವಿನೋದ ಕೇದ್ರಗಳು, ಮುಕ್ತ ಸಭಂಗಣ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ಕರಂದೆಕ್ಕಾಡಿನಿಂದ ನುಳ್ಳಿಪ್ಪಾಡಿ ವರೆಗೆ ಫ್ಲೈ ಓವರ್ ನ ಕಳೆಗಡೆ ರಾತ್ರಿಕಾಲಗಳನ್ನು ಉತ್ಸವವಾಗಿಸುವ ಫುಡ್ ಕೋರ್ಟ್ ಗಳು, ಕಾಲ್ನಡಿಗೆ ಹಾದಿಗಳು, ಸೈಕ್ಲಿಂಗ್ ಹಾದಿಗಳು ಜಾರಿಗೊಳ್ಳಲಿವೆ. ಇಂದಿನ ಕಾಸರಗೋಡಿನ ರಾತ್ರಿಯ ಅನುಭವಗಳನ್ನು ಈ ಯೋಜನೆ ಬದಲಿಸಲಿದೆ. ಅರೆಬಿ ಕಡಲು, ಪಶ್ಚಿಮ ಘಟ್ಟ ಇತ್ಯಾದಗಳ ಸೌಂದರ್ಯ ವೀಕ್ಷಿಸುವ ನಿಟ್ಟಿನಲ್ಲಿ ಮಂಞಂಪದಿಕುನ್ನು ವಲಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಡೆಸಲಾಗುವುದು. ಟ್ರಕ್ಕಿಂಗ್, ಮಿನಿ ಪ್ಲಾನಿಟೋರಿಯಂ, ನಕ್ಷತ್ರ ವೀಕ್ಷಣೆ ಇತ್ಯಾದಿಗಳಿಗೆ ಸೌಲಭ್ಯ ಏರ್ಪಡಿಸಲಾಗುವುದು. ಪಳ್ಳಂ, ಸೀವ್ಯೂ ಪಾರ್ಕ್, ತಳಂಗರೆ, ಚಂದ್ರಗಿರಿ ಕೋಟೆ,  ಇತ್ಯಾದಿಗಳಿಗೆ ಸಂಬಂಧಿಸಿ ಚಂದ್ರಗಿರಿ ನದಿ ಪ್ರವಾಸೋದ್ಯಮ ಯೋಜನೆ ಕಾಸರಗೋಡಿನ ಮುಖಚರ್ಯೆ ಬದಲಿಸಲಿದೆ. ಇದರಲ್ಲಿ ಸೀಡ್ ಬೋಟ್, ಪೆಡಲ್ ಬೋಟು, ಸೀ ಸ್ಪೋಟ್ರ್ಸ್ ಇತ್ಯಾದಿ ಇರುವುವು. ಪೆÇಸಡಿಗುಂಪೆ, ಕಂಬಂ ಜಲಪಾತ ಇತ್ಯಾದಿ ಕಡೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಡೆಯಲಿದೆ. ಕೋಟಂಚೇರಿ ಪ್ರದೇಶದಲ್ಲಿ ಕೇಬಲ್ ಕಾರು ಸಹಿತ ಸಜ್ಜುಗೊಳಿಸಿ ಆಕರ್ಷಣೀಯ ಕೇಂದ್ರ ಇರ್ಮಿಸಲಾಗುವುದು. ಈ ಚಟುವಟಿಕೆಗಳ ಪ್ರಗತಿಯೊಂದಿಗೆ ಏರ್ ಸ್ಟ್ರಿಪ್ ಸಂಬಂಧ ಬೇಕಲ್ ಟೌನ್ ಶಿಪ್ ಅಭಿವೃದ್ಧಿಯೂ ಜಾರಿಗೊಳ್ಳಲಿದೆ ಎಂದು ತಿಳಿಸಲಾಯಿತು.
      ಜಿಲ್ಲಾ ವಾರ್ತಾ ಇಲಾಖೆ ಪ್ರತಿನಿಧಿ ಆಖಿನ್ ಮರಿಯ ಅವರು ಜಿಲ್ಲೆಯ ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಉದ್ಯಮ ವಲಯಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಮಂಡಿಸಿದರು. ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ಸಂವಾದಕ್ಕೆ ನೇತೃತ್ವ ವಹಿಸಿದ್ದರು. ಜಿಲ್ಲಾ ಯುವಜನ ಕೇಂದ್ರ ಪ್ರತಿನಿಧಿಗಳು, ಕೇಂದ್ರ ವಿವಿ ವಿದ್ಯಾರ್ಥಿಗಳು, ಸಾರ್ವಜನಿಕರು ಸಂವಾದ ನಡೆಸಿದರು. ಶಾಸಕರಾದ ಎಂ.ರಾಜಗೋಪಾಲ್, ಎಂ.ಸಿ.ಕಮರುದ್ದೀನ್, ನೀಲೇಶವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries