ಕಾಸರಗೋಡು: ಆದರ್ಶ ವ್ಯಕ್ತಿಯಾಗಿ ಬದುಕಿದರೆ ಅವನಿಗೆ ಮಾತ್ರವಲ್ಲ ಸಮಾಜಕ್ಕೂ ಲಾಭವಾಗುತ್ತದೆ ಎಂಬುದಾಗಿ ಕೂಟ ಮಹಾ ಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ಆಧ್ಯಕ್ಷ ಎಸ್. ಎನ್.ಮಯ್ಯ ಬದಿಯಡ್ಕ ಅಭಿಪ್ರಾಯ ಪಟ್ಟರು. ಒಳ್ಳೆಯ ಸಮಾಜ ವಿರಬೇಕಾದರೆ ಉತ್ತಮ ವ್ಯಕ್ತಿಗಳಿರಬೇಕು ಎಂಬುದಾಗಿಯೂ ಅವರು ಹೇಳಿದರು.
ಡಾ.ಗಣೇಶ ಮಯ್ಯ ಅವರ ಮನೆಯಲ್ಲಿ ನಡೆದ ಕೂಟಮಹಾ ಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಖ್ಯಾತ ವೈದ್ಯ ಡಾ.ಗಣೇಶ ಮಯ್ಯ, ಅಂಗ ಸಂಸ್ಥೆಯ ಗೌರವಾಧ್ಯಕ್ಷ ಎಂ.ನರಸಿಂಹ ರಾಜ ಮಾಸ್ತರ್ ಮುಂತಾದವರು ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು.
ಸಾಲಿಗ್ರಾಮ ದೇಗುಲಕ್ಕೆ ವಾರ್ಷಿಕ ಗುರುಸ್ಥಾನ ಭೇಟಿ ಕಾರ್ಯಕ್ರಮ ನಡೆಸಿದ್ದು ಇದರ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಂಗಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಎಂ. ಮಧೂರು ಅವರು ಕೃತಜ್ಞತೆಗಳನ್ನು ಸಲ್ಲಿಸಿದರು. ಇದರ ಲೆಕ್ಕಪತ್ರವನ್ನು ಅವರು ಮಂಡಿಸಿದರು.
ಅಂಗಸಂಸ್ಥೆಯ ಮುಂದಿನ ಸಂಪರ್ಕ ಸಭೆಯನ್ನು ಫೆಬ್ರವರಿ 16ರಂದು ಅಪರಾಹ್ನ 3 ರಿಂದ ಮಧೂರಿಗೆ ಸಮೀಪದ ಅರಂತೋಡಿನ ನಾರಾಯಣ ಅಡಿಗರ ಮನೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಎಲ್ಲಾ ಕೂಟ ಬಂಧುಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಯಿತು. ಎಂ.ನಾರಾಯಣ ರಾವ್ ಪೆರ್ಲ ಸ್ವಾಗತಿಸಿ, ಕೃಷ್ಣ ಕಾರಂತ ಬನ್ನೂರು ವಂದಿಸಿದರು.


