HEALTH TIPS

ಕೊರೋನಾವೈರಸ್: ಚೀನಿಯರಿಗೆ ಮತ್ತು ವಿದೇಶಿಯರಿಗೆ ವೀಸಾ ನಿಯಮ ಬಿಗಿಗೊಳಿಸಿದ ಭಾರತ

   
         ಬೀಜಿಂಗ್: ಕೊರೊನಾ ವೈರಸ್ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಚೀನಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಭಾರತ ಸರ್ಕಾರ ತನ್ನ ದೇಶದಲ್ಲಿ ಸೋಂಕು ವ್ಯಾಪಕವಾಗಿ ಹಬ್ಬದಂತೆ ಮುಂಜಾಗ್ರತೆ ಕ್ರಮವಾಗಿ ವೀಸಾ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿದೆ.
        ಚೀನೀಯರಿಗೆ ಮತ್ತು ಕಳೆದ ಎರಡು ವಾರಗಳಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿದ ವಿದೇಶಿಯರಿಗೆ ಈಗಿರುವ ವೀಸಾವನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಚೀನಾದ ಕೇಂದ್ರ ನಗರ ವುಹಾನ್ ಪ್ರಾಂತ್ಯದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡು ಅದು ವ್ಯಾಪಕವಾಗಿ ಹಬ್ಬಿ ನಿಯಂತ್ರಣಕ್ಕೆ ಬಾರದ ಸ್ಥಿತಿ ತಲುಪಿರುವುದರಿಂದ ಮೊನ್ನೆ ಫೆಬ್ರವರಿ 2ರಂದು ಭಾರತ ಸರ್ಕಾರ ಚೀನಾ ಪ್ರಯಾಣಿಕರಿಗೆ ಮತ್ತು ಚೀನಾದಲ್ಲಿ ನೆಲೆಸಿರುವ ವಿದೇಶಿಗರಿಗೆ ಇ-ವೀಸಾ ಸೌಲಭ್ಯವನ್ನು ತಾತ್ಕಾಲಿಕವಾಗಿ ರದ್ದುಪಡಿಸಿತ್ತು.
ಈ ಮಧ್ಯೆ ಚೀನಾ ದೇಶದಲ್ಲಿ ಕೊರೊನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆ 425ಕ್ಕೇರಿದ್ದು ನಿನ್ನೆ ಒಂದೇ ದಿನ ಮೃತರ ಸಂಖ್ಯೆ 64 ಆಗಿದೆ. ವೈರಸ್ ಕಾಣಿಸಿಕೊಂಡವರ ಸಂಖ್ಯೆ 20 ಸಾವಿರದ 438 ಇದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಅಂಕಿಅಂಶ ನೀಡಿದ್ದಾರೆ.ಈಗಾಗಲೇ ಭಾರತದಲ್ಲಿರುವ(ನಿಯಮಿತ ಅಥವಾ ಇ-ವೀಸಾದಡಿ)ಮತ್ತು ಚೀನಾದಿಂದ ಜನವರಿ 15ರ ನಂತರ ಭಾರತಕ್ಕೆ ಬಂದಿರುವ ವಿದೇಶಿಯರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ (+91-11-23978046 ಮತ್ತು ಇ-ಮೇಲ್ ncov2019@gmail.com ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಭಾರತೀಯ ರಾಯಭಾರಿ ಕಚೇರಿ ಪ್ರಕಟಿಸಿದೆ.
     ವೀಸಾದ ಸಿಂಧುತ್ವ ಬಗ್ಗೆ ಸಾಕಷ್ಟು ಸಂದೇಹಗಳು ಬಂದಿವೆ. ಈಗಿರುವ ವೀಸಾಗಳು ಸಿಂಧುತ್ವ ಹೊಂದಿರುವುದಿಲ್ಲ. ಭಾರತಕ್ಕೆ ಭೇಟಿ ನೀಡಲಿಚ್ಛಿಸುವವರು ಬೀಜಿಂಗ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಶಾಂಘೈ, ಗುವಾಂಗ್ ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಸಚಿವಾಲಯ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries