ಉಪ್ಪಳ: ಬಾಯಾರು ಸಮೀಪದ ದಳಿಕುಕ್ಕು ಶ್ರೀ ದುರ್ಗಾಂಬಾ ಭಜನಾ ಮಂದಿರದಲ್ಲಿ ಭಜನಾ ಮಹೋತ್ಸವವು ಇಂದಿನಿಂದ(ಗುರುವಾರ) ಶನಿವಾರದವರೆಗೆ ನಡೆಯಲಿದೆ.
ಇಂದು ಸಂಜೆ 6.30 ಕ್ಕೆ ಜಿ.ವಸಂತ ಪಂಡಿತ್ ಗುಂಪೆ ಅವರಿಂದ ದೀಪ ಪ್ರಜ್ವಲನ ನಡೆದು ಭಜನಾ ಮಹೋತ್ಸವದ ಆರಂಭವಾಗಲಿದೆ. 30 ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದ್ದು, ಫೆ.07 ರಂದು ಭಜನಾ ಮಹೋತ್ಸವದ ಮಂಗಳಾಚರಣೆ ನಡೆಯಲಿದೆ. ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ಸಹಕರಿಸಲು ಭಜನಾ ಮಂಡಳಿಯ ಸಮಿತಿಯ ವತಿಯಿಂದ ವಿನಂತಿಸಿದ್ದಾರೆ.

