HEALTH TIPS

ಡಾ.ಹಂಪನಾ ದಂಪತಿಗಳು ಕನ್ನಡ ಸಾರಸ್ವತ ಲೋಕದ ಮೇರು ಶಿಖರ : ಪೆÇ್ರ.ಎನ್.ಎಂ.ತಳವಾರ್

 
        ಕಾಸರಗೋಡು: ವಯೋವೃದ್ಧರೂ, ಜ್ಞಾನ ವೃದ್ಧರೂ ಆಗಿರುವ ಮಾದರಿ ದಂಪತಿ ಎಂದೇ ಕರೆಸಿಕೊಂಡಿರುವ ಡಾ.ಹಂಪನಾ ದಂಪತಿಗಳು ಕನ್ನಡ ಸಾರಸ್ವತ ಲೋಕದ ಮೇರು ಶಿಖರ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾಗಿರುವ ಪೆÇ್ರ.ಎನ್.ಎಂ.ತಳವಾರ್ ಹೇಳಿದರು.
     ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗ ಚಾಲದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಪ್ರಾಯೋಜಕತ್ವದಲ್ಲಿ ಅಪೂರ್ವ ಕಲಾವಿದರು ಕಾಸರಗೋಡು ನೇತೃತ್ವದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗ ಚಾಲ, ಕಾಸರಗೋಡು ಇದರ ಸಹಯೋಗದಲ್ಲಿ ಶುಕ್ರವಾರ ಚಾಲದಲ್ಲಿ ಹಮ್ಮಿಕೊಂಡ `ಕನ್ನಡ ಚಿಂತನೆ' ತಿಂಗಳ ಕಾರ್ಯಕ್ರಮ ಹಾಗು ನಾಡೋಜ ಡಾ.ಹಂಪನಾ ಮತ್ತು ನಾಡೋಜ ಡಾ.ಕಮಲಾ ಹಂಪನಾ ಸಾಹಿತ್ಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
      ನಾಡೋಜ ಡಾ.ಹಂಪನಾ ಅವರು ಸೃಜನಶೀಲತೆ, ವಿದ್ವತ್ತು, ಸಂಶೋಧನೆ ಮತ್ತು ಭಾಷಾ ವಿಜ್ಞಾನದ ಅಪಾರ ಭಾಂಡಾರದ ಅಪರೂಪದ ವಿದ್ವಾಂಸರು. ಸರಸ್ವತಿಯ ಔರಸ ಪುತ್ರರೋ ಎಂಬಂತೆ ಹಂಪನಾ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ನಾಡೋಜ ಡಾ.ಕಮಲಾ ಹಂಪನಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಕಥೆ, ಕಾವ್ಯ, ನಾಟಕ, ವಿಮರ್ಶೆ, ಸಂಪಾದನೆ, ಸಂಶೋಧನೆ ಕ್ಷೇತ್ರಗಳಲ್ಲಿ ಅವರ ಸಾಧನೆ ಗಮನಾರ್ಹ ಎಂದರು. ಈ ದಂಪತಿಗಳ ಸಾಧÀನೆ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಡಾ.ಹಂಪನಾ ದಂಪತಿಗಳು ಸಾಹಿತ್ಯ ಕ್ಷೇತ್ರದಲ್ಲಿ ತಾವು ಬೆಳೆಯುತ್ತಾ ನೂರಾರು ಲೇಖಕರನ್ನು, ಮುಂದಿನ ಜನಾಂಗವನ್ನು  ಬೆಳೆಸಿದ್ದಾರೆ. ಅವಕಾಶ ವಂಚಿತ ಸಮುದಾಯ ಬೆಳೆಯಬೇಕು ಎಂಬ ಆಶಯದೊಂದಿಗೆ ಸಾಕಷ್ಟು ಪ್ರತಿಭೆÉಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ ಎಂದರು.
        ಕನ್ನಡದ ಪ್ರೀತಿಗೆ ಮೆಚ್ಚುಗೆ : ಕಾಸರಗೋಡಿನ ಜನರ ಕನ್ನಡದ ಬಗೆಗಿನ ಭಾಷಾಭಿಮಾನ, ಪ್ರೀತಿಗೆ, ಕನ್ನಡ ಉಳಿಸಲು ನಡೆಸುತ್ತಿರುವ ಹೋರಾಟಕ್ಕೆ ಮಾರು ಹೋಗಿದ್ದೇನೆ. ಕನ್ನಡದ ಹಸಿವು ಕಂಡು ಅಭಿಮಾನ ಮೂಡಿದೆ ಎಂದು ಇದೆ ಸಂzಭರ್Àದಲ್ಲಿ ಪೆÇ್ರ.ಎನ್.ಎಂ.ತಳವಾರ್ ಹೇಳಿದರು.
     ಸಂಶೋಧÀನೆಗೆ ಪ್ರಶಸ್ತ ಸ್ಥಳ : ಕಾಸರಗೋಡು ಸಪ್ತ ಭಾಷಾ ಸಂಗಮ ಭೂಮಿ ಎಂದೇ ಪ್ರಸಿದ್ಧ. ಆದರೆ ಇಲ್ಲಿ ಕೇವಲ ಸಪ್ತ ಭಾಷೆಯಲ್ಲ. 21 ಕ್ಕೂ ಅಧಿಕ ಭಾಷೆಯನ್ನಾಡುವ ಜನರಿದ್ದಾರೆ. ಈ ಹಿನ್ನೆಲೆಯಲ್ಲಿ ಭಾಷೆ, ಸಾಹಿತ್ಯ ಸಂಶೋಧನೆಗೆ ಪೂರಕ ಪ್ರದೇಶವಾಗಿದೆ ಎಂದು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕಣ್ಣೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಂ.ಸಿ.ರಾಜು ಹೇಳಿದರು.
      ಕಾರ್ಯಕ್ರಮದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ಅವರು ಸ್ವಾಗತಿಸಿ, ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಡಾ.ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸಿದರು. ಅಪೂರ್ವ ಕಲಾವಿದರು ಕಾಸರಗೋಡು ಸಂಸ್ಥೆಯ ಅಧ್ಯಕ್ಷ ಉಮೇಶ ಎಂ.ಸಾಲಿಯಾನ್ ಪ್ರಾಸ್ತಾವಿಕ ಮಾತನಾಡಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಶ್ರದ್ಧಾ ಭಟ್ ನಾಯರ್ಪಳ್ಳ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ನಾಡೋಜ ಡಾ.ಹಂಪನಾ ಮತ್ತು ನಾಡೋಜ ಡಾ.ಕಮಲಾ ಹಂಪನಾ, ಅಧ್ಯಾಪಕಿ ಸೌಮ್ಯಾ ಪ್ರಸಾದ್ ಕಿಳಿಂಗಾರು, ಹಿರಿಯ ಸಂಶೋಧಕ ಪೆÇ್ರ.ಸಿ.ನಾಗಣ್ಣ, ಹಿರಿಯ ವಿದ್ವಾಂಸ ಪೆÇ್ರ.ಎನ್.ಎಸ್.ತಾರಾನಾಥ್ ಮೊದಲಾದವರು ಉಪಸ್ಥಿತರಿದ್ದರು.
     ಡಾ.ಹಂಪನಾ ದಂಪತಿಗಳ ಸಾಹಿತ್ಯದ ಬಗೆಗಿನ ವಿಚಾರ ಸಂಕಿರಣ, ನಾಡೋಜ ದಂಪತಿಗಳಿಗೆ ಸಮ್ಮಾನ ಮತ್ತು ಅಭಿನಂದನೆ ನಡೆಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries