HEALTH TIPS

ಪೆರ್ಣೆ ಮುಚ್ಚಿಲೋಟ್ ಶ್ರೀಕ್ಷೇತ್ರದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ.15 ರಿಂದ


          ಕುಂಬಳೆ: ವಾಣಿಯ ಅಥವಾ ಗಾಣಿಗ ಸಮಾಜದ ಪ್ರಸಿದ್ದ ಆರಾಧನಾ ಕೇಂದ್ರವಾದ ಸೀತಾಂಗೋಳಿ ಸಮೀಪದ ಶ್ರೀಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾ.15 ರಿಂದ 20ರ ವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
         ಹಲವು ಶತಮಾನಗಳಿಂದ ಚಾರಿತ್ರಿಕ ಹಿನ್ನೆಲೆಯನ್ನು ಒಳಗೊಂಡ ಪೆರ್ಣೆ ಶ್ರೀಕ್ಷೇತ್ರವು ಸಮಾಜಕ್ಕೆ ಆದರ್ಶಪ್ರಾಯವಾಗಿರುವ ಆಚಾರ ಅನುಷ್ಠಾನಗಳನ್ನು ಪಾಲಿಸಿಕೊಂಡು ಬಂದಿದ್ದು, ಸಾಮಾಜಿಕ ಹಿತದೃಷ್ಟಿಯಿಂದ ಸಮಾನತೆ, ಸರಳತೆ, ಸಹೋದರತೆಯನ್ನು ಇಲ್ಲಿಯ ವಿಶೇಷತೆಯಾಗಿ ಗುರುತಿಸಲ್ಪಟ್ಟಿದೆ. ಕಳೆದ ಒಂದು ವರ್ಷ ಒಂಭತ್ತು ತಿಂಗಳುಗಳಿಂದ ಕ್ಷೇತ್ರದ ನವೀಕರಣ ಪ್ರಕ್ರಿಯೆಗಳು ನಡೆಯುತ್ತಿದ್ದು, 2018ರ ಜೂನ್ 20 ರಂದು ಸಾನ್ನಿಧ್ಯಗಳನ್ನು ಬಾಲಾಲಯಗಳಲ್ಲಿ ಪ್ರತಿಷ್ಠಾಪಿಸಿ ಮೂಲಕ್ಷೇತ್ರದ ಅದೇ ಸ್ಥಾನದಲ್ಲಿ ನವೀಕರಣ ಕೆಲಸಗಳು ಇದೀಗ ಪೂರ್ತಿಗೊಂಡಿದೆ.
         ಕಾರ್ಯಕ್ರಮದ ಅಂಗವಾಗಿ ಮಾ.15 ರಂದು ಬೆಳಿಗ್ಗೆ 9ಕ್ಕೆ ಅನಂತಪುರ ಶ್ರೀಅನಂತಪದ್ಮನಾಭ ಶ್ರೀಕ್ಷೇತ್ರದ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮಿಸಲಿದೆ. 10ಕ್ಕೆ ಉಗ್ರಾಣ ಮುಹೂರ್ತ, ಸಂಜೆ 5.30ಕ್ಕೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, ಸಂಧ್ಯಾದೀಪಾರಾಧನೆ, ಆಚಾರ್ಯವರಣ ನಡೆಯಲಿದೆ. 5.45ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. 7 ರಿಂದ ಅಂಕುರಾರೋಹಣ, ಪ್ರಾಸಾದ ಶುದ್ದಿ, ಅಸ್ತ್ರ ಕಲಶಪೂಜೆ, ವಾಸ್ತುಪೂಜೆ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ರಾತ್ರಿಪೂಜೆ ನಡೆಯಲಿದೆ. ರಾತ್ರಿ 8 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
       ಮಾ.16 ರಂದು ಬೆಳಿಗ್ಗೆ 5.30ರಿಂದ ಗಣಪತಿಹೋಮ, ಉಷಃಪೂಜೆ, ಅಂಕುರಪೂಜೆ, ಬಿಂಬಶುದ್ದಿ, ಕಲಶಪೂಜೆ, ಪ್ರಾಯಶ್ಚಿತ್ತ ಹೋಮ, ಕಲಶಾಭಿಷೇಕ, ಅಪರಾಹ್ನ 2 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಸಂಜೆ 5.30 ರಿಂದ ಅಂಕುರಪೂಜೆ, ಹೋಮಕುಂಡ ಶುದ್ದಿ, ದೇವೀಪೂಜೆ, ರಾತ್ರಿಪೂಜೆ ನಡೆಯಲಿದೆ. ರಾತ್ರಿ 8 ರಿಂದ ಸಾಂಸ್ಕøಯಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.17 ರಂದು ಬೆಳಿಗ್ಗೆ 5.30ರಿಂದ ಗಣಪತಿಹೋಮ, ಅಂಕುರಪೂಜೆ, ಶಾಂತಿಹೋಮ, ಅದ್‍ಬುತ ಶಾಂತಿ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಅಪರಾಹ್ನ 2 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಸಂಜೆ 5.30 ರಿಂದ ಅಂಕುರಪೂಜೆ, ಹೋಮಕುಂಡ ಶುದ್ದಿ, ದೇವಿ ಪೂಜೆ, ರಾತ್ರಿಪೂಜೆ, ರಾತ್ರಿ 8 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.18 ರಂದು ಬೆಳಿಗ್ಗೆ 5.30 ರಿಂದ ಗಣಪತಿಹೋಮ, ಅಂಕುರಪೂಜೆ, ಅದ್ಬುತ ಶಾಂತಿ ಹೋಮ, ನಾಗಪ್ರತಿಷ್ಠೆ, ಗುಳಿಗ ಪ್ರತಿಷ್ಠೆ, ಶ್ವಾನಶಾಂತಿಹೋಮ, ಹೋಮ ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಮಧ್ಯಾಹ್ನ 2 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಸಂಜೆ 5.30 ರಿಂದ ಅಂಕುರಪೂಜೆ, ಕಲಶ ಮಂಟಪ ಶುದ್ದಿ, ರಾತ್ರಿಪೂಜೆ, ದೇವೀ ಪೂಜೆ, ರಾತ್ರಿ 8 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.19 ರಂದು ಬೆಳಿಗ್ಗೆ 5.30ರಿಂದ ಗಣಪತಿಹವನ, ಉಷಃಪೂಜೆ, ಅಂಕುರಪೂಜೆ, ಬಿಂಬಶುದ್ದಿ, ಕಲಶಪೂಜೆ, ಪ್ರಾಯಶ್ಚಿತಹೋಮ, ಪ್ರಾಯಶ್ಚಿತ್ತ ಹೋಮ ಕಲಶಾಭಿಷೇಕ, ಅಪರಾಹ್ನ 2 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಸಂಜೆ 5.30 ರಿಂದ ಅಂಕುರಪೂಜೆ, ಹೋಮಕುಂಡ ಶುದ್ದಿ, ದೇವಿ ಪೂಜೆ, ರಾತ್ರಿ ಪೂಜೆ, ರಾತ್ರಿ 8 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
    ಮಾ.20 ರಂದು ಬೆಳಿಗ್ಗೆ 5.30 ರಿಂದ ಗಣಪತಿಹೋಮ, ಉಷಃಪೂಜೆ, ತತ್ವಹೋಮ, ತತ್ವಕಲಶ ಪೂಜೆ, ಬಳಿಕ 6.30 ರಿಂದ 7.59ರ ಶ್ರವಣ ನಕ್ಷತ್ರ ಸುಮುಹೂರ್ತದಲ್ಲಿ ಪ್ರತಿಷ್ಠೆ, ಪರಿಕಲಶಾಭಿಷೇಕ, ತತ್ವಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಬಳಿಕ ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries