HEALTH TIPS

ಪಾತೂರು ಶಾಲಾ ಕಲಿಕೋತ್ಸವ- `ಕಲಿಕಾ ಉತ್ಸವ ಮಕ್ಕಳ ಭವಿಷ್ಯದ ಮೆಟ್ಟಿಲು'


       ಮಂಜೇಶ್ವರ: ಪಾತೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಲಿಕಾ ಉತ್ಸವವನ್ನು ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಉದ್ಘಾಟಿಸಿ ಕಲಿಕಾ ಉತ್ಸವ ಮಕ್ಕಳಿಗೆಲ್ಲಾ ಪ್ರೇರಣೆ ನೀಡಿ ಅದು ಭವಿಷ್ಯದ ಮೆಟ್ಟಲುಗಳಾಗಲಿ ಎಂದು ಹಾರೈಸಿದರು.
     ಶಾಲಾ ಅಭವೃದ್ಧಿಗಾಗಿ 2020-21 ನೇ ಸಾಲಿನ ಆರ್ಥಿಕ ವರ್ಷದಲ್ಲಿ 3 ಲಕ್ಷ ರೂಪಾಯಿ ಮತ್ತು ಮಕ್ಕಳಿಗೆ ಶುದ್ಧ ಕುಡಿಯುವ ನೀರು ಯಂತ್ರ ಹಾಗೂ ಆಧುನಿಕ ಶಿಕ್ಷಣಕ್ಕಾಗಿ ಕಂಪ್ಯೂಟರ್ ಮೀಸಲಿರಿಸಲಾಗಿದೆ ಎಂದರು. ನಾನೂ ಈ ಶಾಲೆಯ ಹಳೆ ವಿದ್ಯಾರ್ಥಿ. ಪಂಚಾಯತಿಯ ಏಕೈಕ ಸರ್ಕಾರಿ ಶಾಲೆ. ಇದನ್ನು ಮಾದರಿ ಶಾಲೆ ಯಾಗಿ ಅಭಿವೃದ್ಧಿ ಪಡಿಸಲು ಈ ಶಾಲೆಗೆ ಮಕ್ಕಳನ್ನು ದಾಖಲಿಸಿ ಎಂದು ಕರೆ ನೀಡಿದರು.
       ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತಿ ಸದಸ್ಯ ಗೀತಾ ಸಾಮಾನಿ ಮಾತನಾಡಿ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಅನೇಕ ದೊಡ್ಡ ಹುದ್ದೆಗಳಲ್ಲಿ ಇದ್ದಾರೆ. ಅವರನ್ನು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂದು ಕರೆ ನೀಡಿದರು.
      ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಮಾತನಾಡಿ ಗುಣ ಮಟ್ಟದ ಶಿಕ್ಷಣ ಸಾರ್ವಜನಿಕ ಶಿಕ್ಷಣ ಸಂಸ್ಥೆ ಗಳಲ್ಲಿ ಸಿಗುತ್ತದೆ. ಅದನ್ನು ಈ ಕಲಿಕಾ ಉತ್ಸವದಲ್ಲಿ ನಮಗೆಲ್ಲರಿಗೂ ಕಾಣಬಹುದು. ಈ ಶಾಲೆ ಈ ಊರಿನ ಸ್ವತ್ತು. ಅದನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
      ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ನಿರೂಪಣಾಧಿಕಾರಿ ನಾರಾಯಣ ದೇಲಂಪಾಡಿ ಮಾತನಾಡಿ ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಕರು ಮತ್ತು ಹಳೆ ವಿದ್ಯಾರ್ಥಿ ಗಳು ಭಾಗವಹಿಸಿರುವುದು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು. ಜೀವನದಲ್ಲಿ ಎ ಪ್ಲಸ್ ಪಡೆಯಲು ಈ ಕಲಿಕಾ ಉತ್ಸವ ಮಕ್ಕಳಿಗೆಲ್ಲಾ ಪ್ರೇರಣೆ ನೀಡಲಿ ಎಂದು ಹಾರೈಸಿದರು.
      ಶುಭಾಶಸನೆಗೈದ ಡಿ.ಎಂ.ಕೆ.ಮುಹಮ್ಮದ್ ಮಾತನಾಡಿ ಇಂಗ್ಲಿಷ್ ವ್ಯಾಮೋಹ ಬಿಡಿ. ಹತ್ತು ಮಂದಿಗಳು ಈ ಶಾಲೆಯ ಹಿರಿಮೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದಲ್ಲಿ ಶಾಲೆಯ ಮಕ್ಕಳ ಸಂಖ್ಯೆ ಏರಿಕೆಯಾಗುವುದು ಎಂದರು.
    ಮನೆಯವರು ಚೆನ್ನಾಗಿದ್ದರೆ ಮಾತ್ರ ಆ ಮನೆ ಚೆನ್ನಾಗಿರುತ್ತದೆ. ಹಾಗೆಯೇ ಈ ಶಾಲೆಯ ಶಿಕ್ಷಕರು, ರಕ್ಷಕರು ಒಟ್ಟಾಗಿ ದುಡಿಯುವ ಕಾರಣ ಈ ಶಾಲೆ ಉತ್ತಮ ಹೆಸರು ಪಡೆಯಲು ಕಾರಣವಾಯಿತು. ನನ್ನ ತೀರ್ಥ ರೂಪರು ಸ್ಥಾಪಿಸಿದ ಶಾಲೆ ಇದು. ಈ ಶಾಲೆಗೆ 3 ಎಕ್ರೆ ಸ್ಥಳವಿದೆ. ಈ ಉತ್ಸವ ಮಕ್ಕಳಿಗೆಲ್ಲಾ ಸೂರ್ತಿಯಾಗಲಿ ಎಂದು ದೇವಿ ಪ್ರಸಾದ್ ಪೆÇಯ್ಯತಾಯ ಶುಭ ಹಾರೈಸಿದರು.
      ಕ್ಷೇತ್ರ ನಿರೂಪಣಾಧಿಕಾರಿ ಆದರ್ಶ್, ತರಬೇತುದಾರೆ ಚಂದ್ರಿಕಾ ಟೀಚರ್, ಎಸ್.ಎಂ.ಸಿ. ಅಧ್ಯಕ್ಷ ಅಬ್ದುಲ್ ಅಝೀಝ್, ಮಾತೃಸಂಘದ ಅಧ್ಯಕ್ಷೆ ರೇವತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಬು ಗಟ್ಟಿ ಶುಭ ಹಾರೈಸಿದರು.
     ಮುಖ್ಯೋಪಾಧ್ಯಾಯ ಪದ್ಮನಾಭ ಮಾಸ್ತರ್ ಸ್ವಾಗತಿಸಿ, ಶಿಕ್ಷಕ ಉಸ್ಮಾನ್ ಮಾಸ್ತರ್ ವಂದಿಸಿದರು. ಅಧ್ಯಾಪಕ ಜಯಂತ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳು ತಮ್ಮ ಕಲಿಕಾ ಹಿರಿಮೆ ಗರಿಮೆಗಳನ್ನು ಪ್ರದರ್ಶಿಸಿದರು. ಮಕ್ಕಳಿಗೆ  ಗಿರಿಜಾ ಟೀಚರ್, ಜೈನಬ ಟೀಚರ್, ಜಲಜಾಕ್ಷಿ ಟೀಚರ್, ಭವ್ಯ ಟೀಚರ್ ಕಲಿಕಾ ಹಿರಿಮೆ ಪ್ರದರ್ಶಿಸಲು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಯಶಸ್ವಿಗೆ ಸುಂದರ, ಸರಸ್ವತಿ, ಹರೀಶ್ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries