'
ಕಾಸರಗೋಡು: ಕೋವಿಡ್-19 ವೈರಸ್ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ನೀಡಲಾಗಿರುವ ಕರ್ತವ್ಯದ ಬಗ್ಗೆ ಅವಲೋಕನ ನಡೆಸುವ ನಿಟ್ಟಿನಲ್ಲಿ ಉತ್ತರ ವಲಯ ಡಿಐಜಿ ಸೇತುಮಾಧವನ್ ಸೋಮವಾರ ಕಾಸರಗೋಡಿಗೆ ಭೇಟಿ ನೀಡಿದರು. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್ ಸಾಬು, ಡಿವೈಎಸ್‍ಪಿಗಳ ಸಹಿತ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಜಿಲ್ಲೆಯಲ್ಲಿ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ರಸ್ತೆಗಿಳಿದಿದ್ದು, ಸರ್ಕಾರದ ನಿರ್ದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಜನತಾ ಕಫ್ರ್ಯೂ ಯಶಸ್ಸಿನ ಜತೆಗೆ ಸೋಮವಾರ ಜಿಲ್ಲೆಯಲ್ಲಿ ಲಾಕ್‍ಡೌನ್ ನಡೆಸಲಾಗಿದ್ದು, ಅಗತ್ಯಸಾಮಗ್ರಿ ಖರೀದಿಗೆ ಜನತೆ ಆಗಮಿಸಿರುವುದು ಬಿಟ್ಟರೆ ಮತ್ತೆ ನಗರ ನಿರ್ಜನಗೊಂಡಿದೆ.
ಬಸ್ ನಿಲ್ದಾಣಗಳಲ್ಲಿ ಶುಚೀಕರಣ:
ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಕಾಸರಗೋಡು ನಗರದ ವಿವಿಧೆಡೆ ಅಣುನಾಶಕ ಬಳಸಿ ಶುಚೀಕರಣ ನಡೆಸಲಾಯಿತು.ನಗರದ ಹೊಸ ಬಸ್ ನಿಲ್ದಾಣ ವಠಾರ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಹಿತ ಜನಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಶುಚೀಕರಣ ಕಾರ್ಯ ನಡೆಸಲಾಯಿತು.
ಹೈಕೋರ್ಟು ಮುಚ್ಚುಗಡೆ:
ಕೋವಿಡ್-19 ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟು ಚಟುವಟಿಕೆಯನ್ನು ಏಪ್ರಿಲ್ 8ರ ವರೆಗೆ ಸ್ಥಗಿತಗೊಳಿಸಲಾಗಿದೆ. ತುರ್ತಾಗಿ ಪರಿಗಣಿಸಬೇಕಾದ ಅರ್ಜಿಗಳ ಹೊರತಾಗಿ ಯಾವುದೇ ಕಲಾಪ ನಡೆಯದೆಂದು ಹೈಕೋರ್ಟು ಅಧಿಕಾರಿಗಳು ತಿಳಿಸಿದ್ದಾರೆ.
(ಚಿತ್ರ ಮಾಹಿತಿ: ಕೋವಿಡ್-19 ವೈರಸ್ ವ್ಯಾಪಿಸುತ್ತಿರುವುದರ ಹಿನ್ನೆಲೆಯಲ್ಲಿ ಕಾಸರಗೋಡು ನಗರದ ವಿವಿಧೆಡೆ ಆರೋಗ್ಯ ಇಲಾಖೆ ಶುಚೀಕರಣ ಕಾರ್ಯ ನಡೆಸಿತು.)