ಕಾಸರಗೋಡು: ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಕೋವಿಡ್-19 ನಿಯಂತ್ರಣ ಚಟುವಟಿಕೆಗಳ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಜಿಲ್ಲಾಧಿಕಾರಿ ಕಚೇರಿಯ ಕರೋನಾ ನಿಯಂತ್ರಣ ಕೊಠಡಿಯಲ್ಲಿ ಜರುಗಿತು.ಜಿಲ್ಲಾಧಿಕಾರಿಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರದ ಸಲಹೆ-ಸೂಚನೆಗಳನ್ನುಕಟ್ಟುನಿಟ್ಟಾಗಿ ಪಾಲಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.
ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳಿಂದ ತೊಡಗಿ ಎಲ್ಲರೂ ಏಕತೆಯೊಂದಿಗೆ ಕಾರ್ಯನಿರತರಾಗಬೇಕು ಎಂದು ಜನಪ್ರತಿನಿಧಿಗಳು ಆಗ್ರಹಿಸಿದರು. ಮನೆಗಳಲ್ಲಿ ನಿಗಾದಲ್ಲಿರುವವರು ನಿಯಂತ್ರಣಗಳನ್ನುಕಡ್ಡಾಯವಾಗಿಪಾಲಿಸಬೇಕು ಎಂದು ಸಭೆ ತಿಳಿಸಿದೆ.ಶಾಸಕರಾದ ಕೆ.ಕುಂಞÂರಾಮನ್, ಎಂ.ರಾಜಗೋಪಾಲನ್, ನ್ಯಾಯವಾದಿ ಗೋವಿಂದನ್ ಪಳ್ಳಿಕಾಪಿಲ್, ಜಿಲ್ಲಾವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಮೊದಲಾದವರು ಉಪಸ್ಥಿತರಿದ್ದರು.
ಕೊರೋನಾ ಸೋಂಕು ಬಾಧೆಯ ಸಂಶಯದ ಹಿನ್ನೆಲೆಯಲ್ಲಿ ಮನೆಗಳಲ್ಲಿ ನಿಗಾದಲ್ಲಿರುವವರು ಈ ಅವಧಿಯಲ್ಲಿ ಮನೆಯಿಂದ ಹೊರಗಿಳಿಯಕೂಡದು, ಸಾರ್ವನಿಕ ಸಮಾರಂಭಗಳಲ್ಲಿ ಭಾಗವಹಿಸಬಾರದು. ಈ ಆದೇಶವನ್ನುಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. .ಕೆಲವರು ಈ ಆದೇಶ ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈನಿರ್ಧಾರಕೈಗೊಳ್ಳಲಾಗಿದೆ ಎಂದವರು ತಿಳಿಸಿದರು. ಇಂಥವರನ್ನು ಪ್ರತ್ಯೇಕ ಸಜ್ಜುಗೊಳಿಸಲಾದ ಕರೋನಾ ನಿಯಂತ್ರಣ ಘಟಕಕ್ಕೆ ಸ್ಥಳಾಂತರಿಸಲಾಗುವುದು.ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಬಲ್ಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಪ್ರತ್ಯೇಕ ಕರೊನಾ ಘಟಕಗಳನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು.
ಸೋಂಕು ಪತ್ತೆಯಾದವರು ದುಬೈಯಿಂದ ಆಗಮಿಸಿದವರು:
ಜಿಲ್ಲೆಯಲ್ಲಿ ಮಾರ್ಚ್ 22ರಂದು ನೂತನವಾಗಿ ಸೋಂಕು ಪತ್ತೆಯಾದ ಎಲ್ಲ ಐದೂ ಮಂದಿ ವಿದೇಶದಿಂದ ಆಗಮಿಸಿದವರಾಗಿದ್ದಾರೆ. ಇವರು ದುಬೈಯಿಂದ ಊರಿಗೆ ವಾಪಸಾದವರಾಗಿದ್ದಾರೆ. ಇವರು ಗರಿಷ್ಠ 58ಹಾಗೂ ಕನಿಷ್ಠ 27ವರ್ಷ ಪ್ರಾಯದ ಪುರುಷರಾಗಿದ್ದು, ಇವರು ನೆಲ್ಲಿಕುಂಜೆ, ವಿದ್ಯಾನಗರ, ಚಂದ್ರಗಿರಿ, ಮರಕ್ಕಾಪ್ ಕಡಪ್ಪುರಂ, ಚೆಂಗಳ ಪ್ರದೇಶದ ನಿವಾಸಿಗಳಾಗಿದ್ದಾರೆ. ಕೊವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ 762 ಮಂದಿ ಈಗ ನಿಗಾದಲ್ಲಿದ್ದಾರೆ. ಇವರಲ್ಲಿ 41 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.

