HEALTH TIPS

ಕೊರೊನಾ : ಸುಳ್ಳು ಸಂದೇಶ : ಕೇಸು ದಾಖಲು

   
      ಕಾಸರಗೋಡು:  ಮಾರಕ ಕೊರೊನಾ ವೈರಸ್ ಅನಿಯಂತ್ರಿತವಾಗಿ ವ್ಯಾಪಿಸುತ್ತಿರುವಂತೆ ವಾಟ್ಸಪ್ ಸಹಿತ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಿದ ಕೊಲ್ಲಂ ಚಾಣೆಕ್ಕಲ್ ನಿವಾಸಿ ಫಾಹದ್(25) ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್ 19 ಬಾಧಿತನಿಗೆ ಚಿಕಿತ್ಸೆ ನೀಡಿರುವುದಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ನಡೆಸಿದ್ದನು.
      ಬಸ್ ನಿಲ್ದಾಣಗಳಲ್ಲಿ ಆರೋಗ್ಯ ಅ„ಕಾರಿಗಳಿಂದ ಶುಚೀಕರಣ : ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಆರೋಗ್ಯ ಇಲಾಖೆ ಅ„ಕಾರಿಗಳ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಅಣುನಾಶಕ ಬಳಸಿ ಶುಚೀಕರಣ ನಡೆಸಲಾಯಿತು.
     ನಗರದ ಹೊಸ ಬಸ್ ನಿಲ್ದಾಣದಲ್ಲಿ ಶುಚೀಕರಣ ನಡೆಸಿದ್ದು, ಕೆಎಸ್‍ಆರ್‍ಟಿಸಿ ನಿಲ್ದಾಣದಲ್ಲೂ ಶುಚೀಕರಣ ನಡೆಸಲಾಯಿತು.
         ಬಸ್ ಸೇವೆ ಮೊಟಕು : ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತೀರ್ಮಾನವಾಗುವ ತನಕ ಜಿಲ್ಲೆಯಲ್ಲಿ ಖಾಸಗಿ ಬಸ್ ಸೇವೆ ಮೊಟಕುಗೊಳಿಸಲು ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಘಟಕ ತೀರ್ಮಾನಿಸಿದೆ. ಕೆಎಸ್‍ಆರ್‍ಟಿಸಿ ಬಸ್ ಸೇವೆಯನ್ನು ನಿಲುಗಡೆಗೊಳಿಸಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಮಾ.22 ರಿಂದ ಬಸ್ ಸೇವೆ ಪೂರ್ಣವಾಗಿ ನಿಲುಗಡೆಗೊಂಡಿದೆ.
      ಕೊರೊನಾ ಸೋಂಕಿತರು ಸಂಚರಿಸಿದ ರೂಟ್ ಮ್ಯಾಪ್ ತಯಾರಿಕೆ ಜಿಲ್ಲೆಯಲ್ಲಿ ಸದ್ಯ ನಿಲುಗಡೆಗೊಳಿಸಲಾಗಿದೆ. ಅಗತ್ಯದ ಸಿಬ್ಬಂದಿಗಳ ಕೊರತೆಯೇ ಇದಕ್ಕೆ ಕಾರಣವನ್ನಾಗಿ ನೀಡಲಾಗಿದೆ.
     ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಸೂಪರ್ ಮಾರ್ಕೆಟ್‍ಗಳಲ್ಲಿ ಪೆÇಲೀಸರು ಹೆಚ್ಚಿನ ನಿಗಾ ಇರಿಸತೊಡಗಿದ್ದಾರೆ. ಇಂತಹ ಕೇಂದ್ರಗಳಲ್ಲಿ ಜನರು ಗುಂಪುಗುಂಪಾಗಿ ಬಂದು ಖರೀದಿ ನಡೆಸುವುದನ್ನು ತಡೆಯಲಾಗುತ್ತಿದೆ.
      ನಿಷೇಧ ಜಾರಿಯಲ್ಲಿರುವುದರಿಂದ ಸೋಂಕು ಭೀತಿ ಹಾಗು ಬಸ್ ಸಂಚಾರ ನಿಲುಗಡೆಗೊಂಡಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ರಸ್ತೆಗಳಲ್ಲಿ ಜನಸಂಚಾರ ಅತೀ ವಿರಳವಾಗಿದೆ. ಕೆಲವೊಂದು ಆಟೋ ರಿಕ್ಷಾಗಳು ಮತ್ತು ಖಾಸಗಿ ವಾಹನಗಳು ಮಾತ್ರವೇ ರಸ್ತೆಗಿಳಿದಿದೆ. ನಿಷೇದಾಜ್ಞೆ ಉಲ್ಲಂಘಿಸುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮತ್ತು ಪೆÇಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸರಕಾರಿ ಕಚೇರಿಗಳಿಗೂ ಸರಕಾರ ಒಂದು ವಾರ ರಜೆ ಘೋಷಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries