ರೋಮ್/ನವದೆಹಲಿ: ಇಟಲಿಯಲ್ಲಿ ಮಹಾಮಾರಿ ಕೊರೋನಾ ತನ್ನ ರೌದ್ರನರ್ತನವನ್ನು ಮುಂದುವರೆಸಿದೆ. ಶನಿವಾರ ಒಂದೇ ದಿನ ಬರೋಬ್ಬರಿ 793 ಮಂದಿ ಬಲಿಯಾಗಿದ್ದು ಇದೇ ಮೊದಲು ಒಂದು ದಿನ ಕೊರೋನಾಗೆ ಈ ಪ್ರಮಾಣದಲ್ಲಿ ಬಲಿಯಾಗಿರುವುದು. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 4,825ಕ್ಕೆ ಏರಿಕೆಯಾಗಿದೆ.
ಇದರ ಜೊತೆಗೆ ಜಗತ್ತಿನಲ್ಲಿ ಒಟ್ಟಾರೆ ಈ ಒಂದು ದಿನದಲ್ಲೇ 1,397 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಜಗತ್ತಿನಾದ್ಯಂತ 12,831 ಮಂದಿ ಕೊರೋನಾಗೆ ಬಲಿಯಾಗಿದ್ದು 22 ಸಾವಿರ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.
ಕೊರೋನಾ ವೈರಸ್: ಭಾರತದಲ್ಲಿ 300ರ ಗಡಿ ದಾಡಿದ ಸೋಂಕಿತರ ಸಂಖ್ಯೆ!
ಇದೇ ವೇಳೆ ಭಾರತದಲ್ಲೂ ನಿನ್ನೆ ಹೊಸದಾಗಿ 80 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ 329 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಇದಾಗಲೇ ಐವರು ಮೃತಪಟ್ಟಿದ್ದಾರೆ.
Coronavirus Cases In India
Total number of cases reported: 304
Number of patients who have recovered: 24
Number of deaths: 4
Number of patients who have recovered: 24
Number of deaths: 4




