HEALTH TIPS

ಸಂತೆಗೆ ತಟ್ಟದ ಪ್ಲಾಸ್ಟಿಕ್ ನಿಷೇಧ-ಅಧಿಕೃತರಿಂದ ದಾಳಿ-ವಶ

           
         ಬದಿಯಡ್ಕ: ಪ್ಲಾಸ್ಟಿಕ್ ಬಳಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಉದ್ದೇಶದಿಂದ ಬದಿಯಡ್ಕದ ಶನಿವಾರ ಸಂತೆಗೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತ ಇಲಾಖೆ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದರು. ಸಂತೆ ವ್ಯಾಪಾರಿಗಳಿಂದ ಹಾಗೂ ಗ್ರಾಹಕರಿಂದ ನಿಷೇಧಿಸಲ್ಪಟ್ಟ ಪ್ಲಾಸ್ಟಿಕ್ ಕೈಚೀಲಗಳನ್ನು ಉಪಯೋಗ ಶೂನ್ಯಗೊಳಿಸಿ ತಮ್ಮ ವಶಕ್ಕೆ ಪಡಕೊಂಡರು. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಮುನ್ನೆಚ್ಚರಿಕೆಯನ್ನೂ ನೀಡಿದರು.
        ಸುಡುಬಿಸಿಲ ಮಧ್ಯೆ ವ್ಯಾಪಾರಿಗಳು ಎಂದಿನಂತೆ ತಮ್ಮ ವ್ಯಾಪಾರದಲ್ಲಿ ತೊಡಗಿದ್ದರು. ಮಧ್ಯಾಹ್ನ ಮೂರು ಗಂಟೆಯ ವೇಳೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿರುವುದು ಸಂತೆ ವ್ಯಾಪಾರಿಗಳಿಗೆ ಆಘಾತವನ್ನು ತಂದೊಡ್ಡಿತು. ಕೆಲವೊಂದು ವ್ಯಾಪಾರಿಗಳು ನಿಷೇಧಿಸಲ್ಪಟ್ಟ ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸುತ್ತಿರುವುದನ್ನು ಪತ್ತೆಹಚ್ಚಿದ ಅಧಿಕಾರಿಗಳು ಅದನ್ನು ತಮ್ಮ ವಶಕ್ಕೆ ಪಡೆದುಕೊಂಡರು.
       ಸಮಸ್ಯೆಯಲ್ಲಿ ವ್ಯಾಪಾರಿಗಳು :
    ಗ್ರಾಹಕರು ಕೈಚೀಲಗಳನ್ನು ತಾರದೇ ಇರುವುದು ವ್ಯಾಪಾರಿಗಳಿಗೆ ಸಮಸ್ಯೆಯನ್ನುಂಟುಮಾಡುತ್ತಿದೆ. ತಮ್ಮ ವಸ್ತುಗಳು ವ್ಯಾಪಾರವಾಗಬೇಕಾದರೆ ಕೈಚೀಲಗಳಲ್ಲಿ ತುಂಬಿಸಿ ನೀಡಬೇಕಾಗಿದೆ. ಕಡಿಮೆ ಬೆಲೆಯ ನಿಷೇಧಿತ ಪ್ಲಾಸ್ಟಿಕ್‍ಗಳನ್ನು ಹೊರತುಪಡಿಸಿ ಹೆಚ್ಚಿನ ಮೊತ್ತದ ಕೈಚೀಲಗಳನ್ನು ನೀಡಿದರೆ ವ್ಯಾಪಾರದಲ್ಲಿ ಲಾಭ ಕಡಿಮೆಯಾಗುತ್ತಿದೆ ಎಂಬ ಗೋಳು ವ್ಯಾಪಾರಿಗಳದ್ದಾಗಿದೆ. ಪ್ಲಾಸ್ಟಿಕ್ ವಿರುದ್ಧ ಜನರೇ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ. ಪ್ಲಾಸ್ಟಿಕ್ ಎಂಬ ಭಯಾನಕವಾದ ವಸ್ತು ಭೂಮಿಯನ್ನು ಆವರಿಸಿದ್ದು, ಅದರ ನಿರ್ಮೂಲನೆ ಸವಾಲಾಗಿ ಪರಿಣಮಿಸಿದೆ. ಭೂಗರ್ಭಕ್ಕೇ ವಿಷವನ್ನುಣಿಸುವ ಈ ವಸ್ತುವನ್ನು ತೊರೆಯಲು ಜನತೆಯೇ ಸಿದ್ಧರಾಗಬೇಕಿದೆ. ಪ್ಲಾಸ್ಟಿಕ್ ಮುಕ್ತದತ್ತ ನಮ್ಮ ಚಿತ್ತ ಎಂಬುದನ್ನು ಮನದಲ್ಲಿಟ್ಟು ಮುಂದುವರಿದರೆ ಮಾತ್ರ ಒಂದು ಹಂತದಲ್ಲಿ ಪ್ಲಾಸ್ಟಿಕ್‍ನ್ನು ನಿಯಂತ್ರಿಸಲು ಸಾಧ್ಯವಿದೆ. ಹಂತ ಹಂತವಾಗಿ ಪ್ಲಾಸ್ಟಿಕ್‍ನ್ನು ತ್ಯಜಿಸುವತ್ತ ಜನತೆ ಮನಮಾಡಬೇಕಿದೆ.
           ಪ್ಲಾಸ್ಟಿಕ್ ಹೇಗೆ ತ್ಯಜಿಸಬಹುದು? :
      ನಾನು ಪ್ಲಾಸ್ಟಿಕ್ ಬಳಕೆಯಿಂದ ಹಿಂದೆ ಬರುತ್ತೇನೆ ಎಂದ ದೃಢಸಂಕಲ್ಪ ಮನದಲ್ಲಿರಬೇಕಾದುದು ಅತೀ ಮುಖ್ಯವಾಗಿದೆ. ಅಂಗಡಿಗಳಿಗೆ ಸಾಮಾಗ್ರಿಗಳ ಖರೀದಿಗೆ ತೆರಳುವಾಗ ಕೈಯಲ್ಲೊಂದು ಬಟ್ಟೆಯ ಚೀಲವನ್ನು ತೆಗೆದುಕೊಂಡು ಹೋಗುವುದರಿಂದ ಎಷ್ಟೋ ಪ್ಲಾಸ್ಟಿಕ್ ಚೀಲಗಳು ಮನೆಗೆ ಬರುವುದನ್ನು ತಪ್ಪಿಸಲು ಸಾಧ್ಯವಿದೆ. ನಮ್ಮ ಕೈಯಲ್ಲಿ ಬಟ್ಟೆಯ ಚೀಲವೊಂದು ಇಲ್ಲವೆಂದಾದರೆ ನಾವು ಎಷ್ಟು ಪ್ಲಾಸ್ಟಿಕ್‍ಗಳನ್ನು ಬಳಕೆ ಮಾಡಬೇಕಾಗಿ ಬರುತ್ತದೆ ಎಂಬುದನ್ನು ಆಲೋಚಿಸಬೇಕಾಗಿದೆ. ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳಲ್ಲಿ ಸಂಚರಿಸುವವರು ಪ್ಲಾಸ್ಟಿಕ್‍ಗಳನ್ನು ಪಡೆದುಕೊಳ್ಳದೆ ತಮ್ಮ ವಾಹನದಲ್ಲಿ ಇಟ್ಟು ಸಂಚರಿಸಬಹುದಾಗಿದೆ. ತರಕಾರಿ ಖರೀದಿಗೆ 3ರಿಂದ 4, ಜೀನಸು ಸಾಮಾಗ್ರಿಗಳು, ಬೇಕರಿ ಸಾಮಾಗ್ರಿಗಳು ಹಾಗೂ ಇನ್ನಿತರ ವಸ್ತುಗಳೊಂದಿಗೆ ಅನೇಕ ಪ್ಲಾಸ್ಟಿಕ್ ಚೀಲಗಳು ನಮಗರಿವಿಲ್ಲದೇ ನಮ್ಮ ಮನೆಯನ್ನು ಸೇರುತ್ತವೆ. ಒಂದು ಬಟ್ಟೆಯ ಚೀಲ ಕೈಯಲ್ಲಿಟ್ಟು ನೋಡಿ. ಸಾಮಾಗ್ರಿಗಳನ್ನು ಯಾವುದೇ ಭಯವಿಲ್ಲದೆ ಚೀಲದಲ್ಲಿ ತುಂಬಿಸಬಹುದು. ಪ್ಲಾಸ್ಟಿಕ್ ಬ್ಯಾಗ್‍ನಲ್ಲಾದರೆ ನಮ್ಮ ಗಮನ ಅಲ್ಲೇ ಇರಬೇಕಾಗುತ್ತದೆ. ಆದರೆ ಬಟ್ಟೆಯ ಚೀಲವಿದ್ದರೆ ತುಂಡಾಗಿ ಈಗ ಬೀಳಬಹುದೆಂಬ ಭಯವೇ ಬೇಕಾಗಿಲ್ಲ. ಒಂದು ಬಟ್ಟೆಯ ಚೀಲದಿಂದ ಅದೆಷ್ಟೋ ಪ್ಲಾಸ್ಟಿಕ್‍ಗಳು ನಮ್ಮ ಮನೆಗೆ ಬಾರದಂತೆ ತಡೆಗಟ್ಟಲು ಸಾಧ್ಯವಿದೆ.
ಅಂಗಡಿಗಳಲ್ಲೂ ಇಂದು ಎಲ್ಲಾ ವಸ್ತುಗಳನ್ನು ಪ್ಲಾಸ್ಟಿಕ್‍ನಿಂದಲೇ ಸುತ್ತಿಡಲಾಗುತ್ತಿದೆ. ನೀರಿನ ಬಾಟಲಿಗಳಿಗೂ ಪ್ಲಾಸ್ಟಿಕ್ ಕವರ್ ಇದೆ. ಎಣ್ಣೆ ತಿಂಡಿಗಳು ಹಾಗೂ ಇನ್ನಿತರ ಬೇಕರಿ ಸಾಮಗ್ರಿಗಳ ಮೂಲಕವೂ ಪ್ಲಾಸ್ಟಿಕ್ ನಮ್ಮ ಮನೆಯನ್ನು ಸೇರಿ ಭೂಮಿಯನ್ನೇ ಹಾಳುಗೆಡವುತ್ತಿವೆ. ವಿಶ್ವದಾದ್ಯಂತ ಘನ ತ್ಯಾಜ್ಯ ವಸ್ತುಗಳ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ, ಅತಿ ಭರದಿಂದ ತಲೆ0iÉುತ್ತಿ ಮೆರೆಯುತ್ತಿರುವ ನಗರಗಳು, ತ್ಯಾಜ್ಯ ವಸ್ತುಗಳ ಹೆಚ್ಚಳಕ್ಕೆ ಮುಖ್ಯವಾದ ಕಾರಣಗಳಾಗಿವೆ. ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಇದು ದೊಡ್ಡ ಸವಾಲಾಗಿದೆ. ನಿರುಪಯುಕ್ತ ಪ್ಲಾಸ್ಟಿಕ್ ಅನ್ನು ಸಿಕ್ಕ ಸಿಕ್ಕಲ್ಲಿ ಎಸೆಯುವುದು, ವಿಲೇವಾರಿಯ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದೂ ದುಷ್ಪರಿಣಾಮಗಳಿಗೆ ಕಾರಣವಾಗಿದೆ.
       ಅಭಿಮತಗಳು
     ಪ್ಲಾಸ್ಟಿಕ್ ಬಳಕೆಯ ವಿರುದ್ಧ ಪ್ರತಿಯೊಬ್ಬ ಮಾನವನೂ ಎಚ್ಚೆತ್ತುಕೊಳ್ಳಬೇಕಾಗಿದೆ. ಬಳಕೆಯ ನಂತರ ಹೊರತಳ್ಳುವ  ಪ್ಲಾಸ್ಟಿಕ್ ಉತ್ಪನ್ನಗಳು ಪರಿಸರ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಬಳಕೆಯನ್ನು ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ, ಉಪವಿಭಾಗೀಯ ಮ್ಯಾಜಿಸ್ಟ್ರೇಟ್‍ಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಸ್ಥಳೀಯಾಡಳಿತ ಕಾರ್ಯದರ್ಶಿಗಳು ಮತ್ತು ಕೇಂದ್ರ ಸರಕಾರದಿಂದ ನೇಮಕಗೊಂಡ ಅಧಿಕಾರಿಗಳು ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿದ್ದಾರೆ.
              - ಪ್ರದೀಪನ್, ಬದಿಯಡ್ಕ ಗ್ರಾಪಂ ಕಾರ್ಯದರ್ಶಿ
................................................................................................................
     
         ಒಂದು ಬಾರಿ ಮಾತ್ರ ಉಪಯೋಗಿಸುವ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವನ್ನು ಕೇರಳ ರಾಜ್ಯದಲ್ಲಿ 2020ರ ಜನವರಿ 1ರಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ ಕೆಲವೊಂದು ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಉಪಯೋಗಿಸಲಾಗುತ್ತಿದೆ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗಳ್ಳಲಾಗುವುದು. ಅಗತ್ಯ ವಸ್ತುಗಳನ್ನು ಖರೀದಿಸಲು ಜನರೇ ಬಟ್ಟೆಯ ಕೈಚೀಲಗಳನ್ನು ಬಳಸಲು ಮುಂದೆ ಬರಬೇಕು.
              - ವಿನೋದನ್, ಆರೋಗ್ಯ ಇಲಾಖೆಯ ಅಧಿಕಾರಿ.
.................................................................................................................
     
      ಅದೆಷ್ಟೋ ಮಂದಿ ಗ್ರಾಹಕರು ಬರಿಗೈಯಿಂದ ಖರೀದಿಗಾಗಿ ಆಗಮಿಸುತ್ತಿದ್ದು, ವಸ್ತುಗಳನ್ನು ಕೈಚೀಲಗಳಲ್ಲಿ ನೀಡುವ ಬೇಡಿಕೆಯನ್ನಿರಿಸುತ್ತಾರೆ. ಅನಿವಾರ್ಯವಾಗಿ ಪ್ಲಾಸ್ಟಿಕ್‍ನತ್ತ ಮುಖಮಾಡಬೇಕಾಗುತ್ತದೆ. ಕಳೆದ ಎರಡು ತಿಂಗಳಿನಿಂದ ನಿಷೇಧಿತಪ್ಲಾಸ್ಟಿಕ್ ಕೈಚೀಲಗಳನ್ನು ನೀಡದೆ ವ್ಯಾಪಾರವನ್ನು ಮಾಡುತ್ತಿದ್ದೇವೆ. ಗ್ರಾಹಕರು ಕೈಚೀಲಗಳನ್ನು ತಂದರೆ ಉತ್ತಮ ಬೆಳವಣಿಗೆಯಾಗಲಿದೆ.
              - ಅಶೋಕ ಬದಿಯಡ್ಕ, ತರಕಾರಿ ವ್ಯಾಪಾರಿ
.....................................................................................................................

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries