HEALTH TIPS

ಕಣ್ವತೀರ್ಥ ಶಾಲಾ ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ


        ಮಂಜೇಶ್ವರ: ಕಣ್ವತೀರ್ಥ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಮತ್ತು ಲೀಲಾ ಟೀಚರ್ ಅವರಿಗೆ ಬೀಳ್ಕೊಡುಗೆ ಸಮಾರಂಭ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
       ಕಾರ್ಯಕ್ರಮದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಕೆ.ಎಂ.ಕೆ. ಅವರು ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯೆ ಶೋಭಾ ವಿ.ಶೆಟ್ಟಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ವಿ.ದಿನೇಶ್, ಕನ್ನಡ ಚಿತ್ರ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಭಾಗವಹಿಸಿದರು.
       ಕಾರ್ಯಕ್ರಮದಲ್ಲಿ ಮೊೈದೀನ್ ಕುಂಞÂ, ರಘು ಶೆಟ್ಟಿ, ಶಿವರಾಮ ಮಯ್ಯ, ಯಾಕೋಬ್ ಮೋಹಿದೀನ್ ಕುಂಜತ್ತೂರು, ಅಬ್ದುಲ್ ಜಬ್ಬಾರ್, ನಿಜಾಮುದ್ದೀನ್, ಅಶ್ರಫ್ ಇಬ್ರಾಹಿಂ, ಪುಷ್ಪಲತಾ, ರವಿ ಮಜಲು, ಮೋಹನ್ ಶೆಟ್ಟಿ, ಅಭಿದ್ ಕೆ.ಕೆ, ಅಬ್ದುಲ್ಲಾ, ರಾಮ ಮಜಲು ಮೊದಲಾದ ಗಣ್ಯರು ಉಪಸ್ಥಿತರಿದ್ದರು.
        ಇದೇ ಸಂದರ್ಭದಲ್ಲಿ ಲೀಲಾ ಟೀಚರ್ ಅವರನ್ನು ಅದ್ದೂರಿಯಾಗಿ ಬೀಳ್ಕೊಡಲಾಯಿತು. ದಯಾವತಿ ಟೀಚರ್ ಸ್ವಾಗತಿಸಿದರು. ಅಹಮ್ಮದ್ ಆಲಿ ಮಾಸ್ತರ್ ವಂದಿಸಿದರು. ಅಬ್ದುಲ್ ಮಜೀದ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries