ಉಪ್ಪಳ: ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಕಲಿಕೋತ್ಸವ ಜರಗಿತು. ಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪೈವಳಿಕೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುನಿತ ವಾಲ್ಟಿ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ ಅಧ್ಯಕ್ಷತೆ ವಹಿಸಿದ್ದರು. ಶಶಿಕಲ ಕೆ, ಸುಮಿತ್ರ ಕೆ, ಪ್ರೇಮಾವತಿ ಎಸ್ ಕಲಿಕೋತ್ಸವದ ಸಮಗ್ರ ಮಾಹಿತಿ ನೀಡಿದರು. ಸಮಾರಂಭದಲ್ಲಿ ಪ್ರವೀಣ್ ಕನಿಯಾಲ ಮತ್ತು ಸಂಜೀವ ಚೆಂಬ್ರಕಾನ ನಿರ್ಮಿಸಿದ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಕಥಾವಸ್ತುವನ್ನೊಳಗೊಂಡ 7ನೇ ವಿದ್ಯಾರ್ಥಿಗಳು ನಟಿಸಿರುವ ಕಿರುಚಿತ್ರ ಕಿರುಕಾಣಿಕೆ ಬಿಡುಗಡೆಗೊಳಿಸಲಾಯಿತು. ನಾಟಕ, ಅಭಿನಯ ಗೀತೆ, ನೃತ್ಯ, ಹಾಡು, ವಿಚಾರ ಸಂಕಿರಣ ಮೊದಲಾದ ಪ್ರತಿಭೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಮುಖ್ಯ ಶಿಕ್ಷಕ ಇಬ್ರಾಹಿಂ ಬುಡ್ರಿಯ ಸ್ವಾಗತಿಸಿ, ಶಶಾಂಕ್ ವಿ ಎಸ್ ಮತ್ತು ಗೌತಮ್ ಎಸ್ ನಿರೂಪಿಸಿದರು.
ಪೈವಳಿಕೆನಗರ ಶಾಲೆಯಲ್ಲಿ ಕಲಿಕೋತ್ಸವ
0
ಮಾರ್ಚ್ 15, 2020